Published
1 day agoon
By
Akkare News
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ರಾಜೇಶ್ (ಕಾಳ) ಕೊಲೆ ಆರೋಪ ಎದುರಿಸಿದ್ದ ವ್ಯಕ್ತಿ. ಪಾಂಡವಪುರ ಪಟ್ಟಣದ ಮಂಜು ಎಂಬ ಮಹಿಳೆ 2019ರ ಜೂನ್ 24ರಂದು ತಂದೆಯ ಮನೆಯಿಂದ ನಾಪತ್ತೆಯಾಗಿದ್ದರು. ಜುಲೈ 3ರಂದು ಮಹಿಳೆಯ ತಂದೆ ನಾಗರಾಜು ನೀಡಿದ ದೂರಿನ ಆಧಾರದಲ್ಲಿ ಪಾಂಡವಪುರ ಪೊಲೀಸರು ರಾಜೇಶ್ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧಿಸಿದ್ದರು.
ಮಗನೊಂದಿಗೆ ಸಲುಗೆಯಿಂದಿದ್ದ ರಾಜೇಶ್, ತನ್ನ ಮದುವೆಗೆ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾನೆ ಎಂದು ತಂದೆ ದೂರಿನಲ್ಲಿ ಆರೋಪಿಸಿದ್ದರು. ಪ್ರಕರಣದಲ್ಲಿ ಬಂಧಿತನಾಗಿದ್ದ ರಾಜೇಶ್ ಸುಮಾರು 2 ವರ್ಷ 5 ತಿಂಗಳು ಜೈಲಿನಲ್ಲಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.
ಪ್ರಿಯಕರನೊಂದಿಗೆ ಎರಡನೇ ಮದುವೆ! ಇದೀಗ ನಾಪತ್ತೆಯಾಗಿದ್ದ ಮಂಜು ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಯಲ್ಲಿ ಎರಡನೇ ಪತಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ. ಮೊದಲ ಪತಿ ಮಂಜುನಾಥ್ ಜತೆಗೆ ವೈವಾಹಿಕ ಜೀವನ ಇಷ್ಟವಿಲ್ಲದ ಕಾರಣ, ತಾನು ಪ್ರೀತಿಸುತ್ತಿದ್ದ ಚಾಮರಾಜನಗರದ ನಾಗೇಂದ್ರ ಎಂಬಾತನೊಂದಿಗೆ ಮದುವೆಯಾಗಿ ತಮಿಳುನಾಡಿನಲ್ಲಿ ಕೆಲ ವರ್ಷ ವಾಸಿಸಿದ್ದೆ. ಬಳಿಕ ಮಾಯಿಗೋನಹಳ್ಳಿಗೆ ಬಂದು ನೆಲೆಸಿದ್ದೇನೆ ಎಂದು ಮಂಜು ತಿಳಿಸಿದ್ದಾರೆ.






