Published
1 hour agoon
By
Akkare News

ಡಿ.20 ರಂದುಸದ್ರಿ ದೇವಸ್ಥಾನದ ವಠಾರದಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಕೋಳಿ ಅಂಕ ನಡೆಸಲು ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆದಿರಲಿಲ್ಲ. ಸದ್ರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಈ ಕೋಳಿ ಅಂಕ ಹರಕೆ ರೂಪದಲ್ಲಿ ನಡೆಯುತ್ತದೆ. ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ.ಹರಕೆ ರೂಪದ ಈ ಕೋಳಿ ಅಂಕವು ಬಳಿಕ ಶಾಸಕ ಅಶೋಕ್ ರೈ ಮುಂದಾಳುತ್ವದಲ್ಲಿ ನಡೆದಿತ್ತು.
ಈ ವೇಳೆ ಪೊಲೀಸರು ದಾಳಿ ನಡೆಸಿ ಶಾಸಕ ಅಶೋಕ್ ರೈ ಮತ್ತು ಇತರೆ 26 ಮಂದಿಯ ವಿರುದ್ದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆಗೊಂಡಿದೆ.




