Connect with us

ಇತರ

ತಾಯಿ ಮತ್ತು ಮಗಳು ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ

Published

on

ಉಡುಪಿಯ ರತ್ನಮಾಲಾ ಹಾಗೂ ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರಿಗೆ ಡಾಕ್ಟರೇಟ್ ಗೌರವ ಉಡುಪಿ: ಕಿನ್ನಿಮೂಲ್ಕಿ ಬಲಾಯಿಪಾದೆಯ ನಿವಾಸಿ ಶ್ರೀ ಸುಧಾಕರ ಸುವರ್ಣ ಅವರ ಪತ್ನಿ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ರತ್ನಮಾಲಾ ಹಾಗೂ ಅವರ ಪುತ್ರಿ ಐಶ್ವರ್ಯ ಎಸ್. ಸುವರ್ಣ ಅವರು ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ ಪಡೆದಿರುವುದು ಅಪರೂಪದ ಹಾಗೂ ಹೆಮ್ಮೆಯ ಸಾಧನೆಯಾಗಿದೆ.

ಡಾ. ರತ್ನಮಾಲಾ ಅವರು ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದಲ್ಲಿ ಕಾರ್ಕಳ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ. ಕೆ. ಅವರ ಮಾರ್ಗದರ್ಶನದಲ್ಲಿ ಹಾಗೂ ಎಂ.ಜಿ.ಎಂ. ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಪುತ್ತಿ ವಸಂತಕುಮಾರ್ ಅವರ ಸಹಮಾರ್ಗದರ್ಶನದಲ್ಲಿ “ತುಳುನಾಡಿನ ಸ್ತ್ರೀ ದೈವಗಳ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಅವರ ಪುತ್ರಿ ಡಾ. ಐಶ್ವರ್ಯ ಎಸ್. ಸುವರ್ಣ ಅವರು ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಐಟಿಕೆ) ಪ್ರಾಧ್ಯಾಪಕರಾದ ಡಾ. ಎ. ಚಿತ್ತರಂಜನ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ “Development of nickel vanadium alloy coatings through different approaches of electroplating and their characterization” ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆದಿದ್ದಾರೆ. ತಾಯಿ ಕನ್ನಡ ಮತ್ತು ತುಳುನಾಡಿನ ಸಾಂಸ್ಕೃತಿಕ ಅಧ್ಯಯನದಲ್ಲಿ, ಮಗಳು ರಸಾಯನಶಾಸ್ತ್ರದ ಸಂಶೋಧನೆಯಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ತಾಯಿ ಮತ್ತು ಮಗಳು ಒಂದೇ ದಿನ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆದಿರುವುದು ಕುಟುಂಬಕ್ಕೆ ಮಾತ್ರವಲ್ಲದೆ ಉಡುಪಿ ಜಿಲ್ಲೆಗೂ ಹೆಮ್ಮೆಯ ಸಂಗತಿಯಾಗಿದೆ. ಇವರ ಅಪರೂಪದ ಸಾಧನೆಗೆ ಕುಟುಂಬದವರು, ಬಂಧುಮಿತ್ರರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement