ಕರ್ನಾಟಕದ ಸರ್ಕಾರಿ ಶಿಕ್ಷಕರ ಬಗ್ಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸರ್ಕಾರಿ ಶಾಲಾ ಶಿಕ್ಷಕರ ಬಗ್ಗೆ ಮಾತನಾಡಿರುವ ಮಾತುಗಳು ಚರ್ಚೆಗೆ ಕಾರಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎರಡು ಪ್ರಮುಖ ಸಮಸ್ಯೆಗಳಿವೆ ಒಂದು ಶಿಕ್ಷಕರ ಕೊರತೆ ಇದೆ ಮತ್ತೊಂದು ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರ ಕೊರತೆ ಇದೆ. ಲಕ್ಷ ಲಕ್ಷ ರೂಪಾಯಿ ಸಂಬಳ ಪಡೆದುಕೊಂಡರೂ ಕೆಲವು ಸರ್ಕಾರಿ ಶಿಕ್ಷಕರು ಗುಣಮಟ್ಟದ ಶಿಕ್ಷಣ ಕೊಡುವುದರಲ್ಲಿ ವಿಫಲರಾಗುತ್ತಿದ್ದಾರೆ ಎಂದು ಐಶ್ವರ್ಯಾ ಅವರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಅವ್ಯವಸ್ಥೆಯ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.

ನಾನು ನೋಡಿದ ಒಂದು ಶಾಲೆಯುಲ್ಲಿ ಸರ್ಕಾರಿ ಶಿಕ್ಷಕರೊಬ್ಬರಿಗೆ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಸಂಬಳ ಬರುತ್ತಿದ್ದರೂ ಅವರು ವಾರದಲ್ಲಿ ಐದು ದಿನ ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಯಾರು ಪರಿಶೀಲನೆ ಮಾಡುತ್ತಿರಲಿಲ್ಲ, ನಮಗೆ ಆ ಅಧಿಕಾರ ಇರಲಿಲ್ಲ. ನಾವು ಹೆಚ್ಚು ಹಣವನ್ನು ವ್ಯಯಿಸುತ್ತಿದ್ದೇವೆ ಹಾಗೂ ನಮ್ಮ ಬಳಿ ಸಂಪನ್ಮೂಲಗಳು ಸಹ ಇವೆ. ಆದರೆ, ಅದನ್ನು ವಿನಿಯೋಗ ಮಾಡುವುದಕ್ಕೆ ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ನಾನು ಸಮಸ್ಯೆಗಳನ್ನು ಮಾತ್ರ ಹೇಳುವುದಿಲ್ಲ, ಸಮಸ್ಯೆ ಯಾಕೆ ಸೃಷ್ಟಿಯಾಗಿದೆ ಹಾಗೂ ಈ ಸಮಸ್ಯೆಗೆ ಪರಿಹಾರ ಏನು ಎನ್ನುವ ವಿಷಯಗಳ ಬಗ್ಗೆಯೂ ಮಾತನಾಡುತ್ತೇನೆ ಎಂದು ಐಶ್ವರ್ಯಾ ಅವರು ಹೇಳಿದ್ದಾರೆ.

ಶಾಲೆಗಳಲ್ಲಿ ಶುಚಿತ್ವ ನೈರ್ಮಲ್ಯ ಕಾಪಾಡಿಕೊಳ್ಳುವುದು ಸಹ ಮುಖ್ಯವಾಗುತ್ತದೆ. ಸರಿಯಾದ ಸಮಯಕ್ಕೆ ಬರುವುದು, ಸಮಯ ಪಾಲನೆ ಮಾಡುವುದು ಸಹ ತುಂಬಾ ಮುಖ್ಯವಾಗುತ್ತದೆ. ಹೆಣ್ಣು ಮಕ್ಕಳಿಗೆ ಪ್ಯಾಡ್ನ ಹಾಕುವುದಕ್ಕೂ ಒಂದು ಡೆಸ್ಟ್ಬಿನ್ ವ್ಯವಸ್ಥೆ ಇಲ್ಲ ಅಂತಲೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
“ಇದೆಲ್ಲವೂ ಸಾಮಾನ್ಯ ಜವಾಬ್ದಾರಿ ಆಗಿದೆ. ನೀರು, ಶೌಚಾಲಯ ಹಾಗೂ ಉತ್ತಮ ಕಟ್ಟಡ ಸೌಲಭ್ಯ ಎನ್ನುವುದೆಲ್ಲವೂ ಸಾಮಾನ್ಯವಾದ ಸಂಗತಿಗಳಾಗಿವೆ ಎಂದು ಐಶ್ವರ್ಯಾ ಅವರು ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಈ ಸೌಲಭ್ಯಗಳ ಕೊರತೆಯಿತ್ತು ಎಂದಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಇದು ದೊಡ್ಡ ವಿಷಯವನ್ನು ಸಣ್ಣ ಪ್ರಮಾಣದ ಹಣ ವಿನಿಯೋಗ ಮಾಡಿದರೆ, ಉತ್ತಮ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ.

ಮುಖ್ಯಮಂತ್ರಿಗಳು ಹೇಳುತ್ತಿದ್ದರು, ಸರ್ಕಾರಿ ಶಾಲೆಗಳಿಗೆ ಸಣ್ಣ ಸಣ್ಣ ಕೊಡುಗೆ ಕೊಡಿ ಎಂದು; ನಾನು ಮತ್ತೊಂದು ವಿಷಯವನ್ನು ಹೇಳುತ್ತೇನೆ. ಸಣ್ಣ ಸಣ್ಣ ಕೊಡುಗೆಗಳು ತುಂಬಾ ದೊಡ್ಡ ವಿಚಾರವಾಗಲಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನವು ಗ್ರಾಮೀಣ ಭಾಗದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವನ್ನು ತಂದುಕೊಟ್ಟಿದೆ. ನಾವು ಸಣ್ಣ ಸಣ್ಣ ಪ್ರೊಜೆಕ್ಟರ್ ಕೊಟ್ಟಿದ್ದೇವು, ಶಾಲಾ ಬಸ್ ಕೊಟ್ಟಿದ್ದೇವೆ. ನಾವು ನಮ್ಮ ಸಂಸ್ಥೆಯ ಬಸ್ಗಳನ್ನು ಸರ್ಕಾರಿ ಶಾಲೆಗಳಿಗೆ ಕೊಟ್ಟಿದ್ದೇವೆ. ಇದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತುಂಬಾನೇ ಅನುಕೂಲವಾಗಿದೆ ಎಂದೂ ಐಶ್ವರ್ಯಾ ಅವರು ಹೇಳಿದ್ದಾರೆ.
