Published
1 hour agoon
By
Akkare News

ಪುತ್ತೂರು ವಿಭಾಗ ವ್ಯಾಪ್ತಿಗೆ ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಕಡಬ ಸುಬ್ರಹ್ಮಣ್ಯ ಉಪವಿಭಾಗಗಳು ಒಳಪಟ್ಟಿದ್ದು, ಇಲ್ಲಿ ಅನೇಕ ಅನುಮತಿ ಪಡೆದ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿರುತ್ತಾರೆ. ವಿಭಾಗದ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮಂಜೂರಾಗಿರುವ 77 ಸಂಖ್ಯೆಯ ಕಾಮಗಾರಿಗಳನ್ನು 24 ಸಂಖ್ಯೆಯ ಗುತ್ತಿಗೆದಾರರಿಗೆ ನಿಗದಿತ ಮಾನದಂಡಗಳ ಪ್ರಕಾರ ಕಂಪನಿ ನಿಯಮಾನುಸಾರ ಹಂಚಿಕೆ ಮಾಡಿ ಕೆಲಸ ನಿರ್ವಹಿಸುತ್ತಿರುವುದಾಗಿದೆ.
ಮಾನ್ಸೂನ್ ಸಂದರ್ಭದಲ್ಲಿ ಪುತ್ತೂರು ವಿಭಾಗದ 19 ಶಾಖೆಗಳಿಗೆ ಮಂಜೂರಾಗಿರುವ ಗ್ಯಾಂಗ್ ಮ್ಯಾನ್ ಗಳನ್ನು ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮುಖಾಂತರ ಅರ್ಹ ಗುತ್ತಿಗೆದಾರರಿಗೆ ನೀಡಿ ಶಾಖಾ ವ್ಯಾಪ್ತಿಯ ನಿರ್ವಹಣೆ ಕೆಲಸಗಳನ್ನು ಮಾಡಿಸುತ್ತಿರುವುದಾಗಿದೆ. ಸದ್ರಿ ಕೆಲಸಗಳನ್ನು ಶಾಖೆಗಳ ಶಾಖಾಧಿಕಾರಿಯವರಿಂದ ಮೇಲ್ವಿಚಾರಣೆ ಮಾಡಿಸಿ, ಉಪವಿಭಾಗಾಧಿಕಾರಿಗಳ ದೃಢೀಕರಣದ ನಂತರವೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕ್ರಮ ಕೈಗೊಂಡಿರುವುದಾಗಿದೆ.
ಪುತ್ತೂರು ಮೆಸ್ಕಾಂ ವಿಭಾಗ ಮತ್ತು ಉಪ ವಿಭಾಗ ಕಚೇರಿಗಳು ಬೆಳಗ್ಗೆ 10:00ರಿಂದ ಸಂಜೆ 5:30 ವರೆಗೆ ಕಾರ್ಯಾಚರಿಸುತ್ತಿದ್ದು ಅಧಿಕಾರಿ/ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಲಭ್ಯರಿರುತ್ತಾರೆ. ಈ ಕುರಿತು ಸಾರ್ವಜನಿಕರಿಂದ/ಗ್ರಾಹಕರಿಂದ ಈವರೆಗೆ ಯಾವುದೇ ದೂರು ಈ ಕಚೇರಿಯಲ್ಲಿ ಸ್ವೀಕರಿಸಿರುವುದಿಲ್ಲ.
అజి ಘನ ಕರ್ನಾಟಕ ಸರ್ಕಾರದ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ಯಾವುದೇ ಅರ್ಹ ವ್ಯಕ್ತಿಯು ಸಲ್ಲಿಸಿ ವಿದ್ಯುತ್ ಪರಿವೀಕ್ಷಕರ ಕಚೇರಿಯಿಂದ ವಿದ್ಯುತ್ ಗುತ್ತಿಗೆದಾರರ ಪರವಾನಿಗೆ ಪಡೆದುಕೊಳ್ಳಬಹುದಾಗಿದ್ದು, ಪುತ್ತೂರು ವಿಭಾಗದ ವ್ಯಾಪ್ತಿಯ ಯಾವುದೇ ಅಧಿಕಾರಿ/ನೌಕರರ ಪತ್ನಿ ವಿಭಾಗದ ವ್ಯಾಪ್ತಿಯಲ್ಲಿ ಕಾರ್ನಿವ್ರಹಿಸುತ್ತಿರುವ 5 ಉಪವಿಭಾಗಗಳಲ್ಲಿ ವಿದ್ಯುತ್ ಸಂಬಂಧಿತ ಕಾಮಗಾರಿಯನ್ನು ನಿರ್ವಹಿಸಿರುವುದಿಲ್ಲ.
ಮೆಸ್ಕಾಂ ಇಲಾಖೆಯ ಅಧಿಕಾರಿಯೊಬ್ಬರು ಗುತ್ತಿಗೆದಾರರ ಮಹಿಳಾ ಸಹಾಯಕಿಯನ್ನು ಸ್ಥಳ ಪರಿಶೀಲನೆಯ ನೆಪದಲ್ಲಿ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ ಎಂಬ ಕುರಿತು ಈ ಕಚೇರಿಗೆ ಈವರೆಗೆ ದೂರುಗಳು ಬಂದಿರುವುದಿಲ್ಲ ಹಾಗೂ ಸಂಬಂಧಪಟ್ಟವರು ದೂರು ನೀಡಿದಲ್ಲಿ ಇಲಾಖೆಯ ನಿಯಮಾನುಸಾರ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಸದ್ರಿ ಸಭೆಯಲ್ಲಿ ಸ್ಪಷ್ಟಿಕರಣ ನೀಡಲಾಗಿರುತ್ತದೆ.



