Published
16 hours agoon
By
Akkare News
ಆಹಾರ ಸುರಕ್ಷತಾ ಅಧಿಕಾರಿಗಳ ತಪಾಸಣೆ ವೇಳೆ ಘಟಕದಲ್ಲಿ ಗಂಭೀರ ಸ್ವರೂಪದ ಲೇಬಲಿಂಗ್ ಹಾಗೂ ಬ್ರ್ಯಾಂಡಿಂಗ್ ಲೋಪದೋಷಗಳು ಪತ್ತೆಯಾಗಿವೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಖರೀದಿಸಿದ ಕಚ್ಚಾ ಶೇಂಗಾ (ನೆಲಕಡಲೆ) ಎಣ್ಣೆಯನ್ನು ಇಲ್ಲಿಗೆ ತಂದು ಮರು-ಪ್ಯಾಕ್ ಮಾಡಲಾಗುತ್ತಿತ್ತು. ಬಳಿಕ ಅದನ್ನು ಅಸಲಿಯಾಗಿ ‘ಕೋಲ್ಡ್-ಪ್ರೆಸ್ಡ್’ (ಗಾಣದ) ಶೇಂಗಾ ಎಣ್ಣೆ ಎಂದು ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ದಾರಿತಪ್ಪಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದು ಗ್ರಾಹಕರ ಆರೋಗ್ಯದ ಜತೆ ಚೆಲ್ಲಾಟವಾಡುವ ಸ್ಪಷ್ಟ ಮಿಸ್ಬ್ರ್ಯಾಂಡಿಂಗ್ ಹಾಗೂ ವಂಚನೆ ಕೃತ್ಯವಾಗಿರುವುದರಿಂದ ಇಲಾಖೆಯು ತಕ್ಷಣವೇ ಜಪ್ತಿ ಕಾರ್ಯಾಚರಣೆ ಕೈಗೊಂಡಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಮಾಹಿತಿಯ ಪ್ರಕಾರ, ದಾಳಿ ನಡೆಸಿ ಒಟ್ಟು ಈ ಕೆಳಗಿನ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ: ಶೇಂಗಾ ಎಣ್ಣೆಯ 11 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 10 ಕೆ.ಜಿ.) ಶೇಂಗಾ ಎಣ್ಣೆಯ 30 ಕ್ಯಾನ್ಗಳು (ಪ್ರತಿ ಕ್ಯಾನ್ಗೆ 35 ಲೀಟರ್) ಕೊಬ್ಬರಿ ಎಣ್ಣೆಯ 4 ಪೆಟ್ಟಿಗೆಗಳು (ಪ್ರತಿ ಪೆಟ್ಟಿಗೆಗೆ 20 ಕೆ.ಜಿ.) ಒಟ್ಟಾರೆಯಾಗಿ ಲಕ್ಷಾಂತರ ಮೌಲ್ಯದ 1,240 ಕೆ.ಜಿ. ಗೂ ಅಧಿಕ ಅಡುಗೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಸಂಸ್ಥೆಯ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಜರುಗಿಸಲು ಇಲಾಖೆ ಮುಂದಾಗಿದೆ.





