Connect with us

ಇತರ

ತಾ.ಪಂ,ಜಿಲ್ಲಾ ಪಂಚಾಯತ್ ಚುನಾವಣೆಗೆ ಸರ್ಕಾರದ ಸಿದ್ಧತೆ?: ಚುನಾವಣಾಧಿಕಾರಿಗಳ ನೇಮಕಕ್ಕೆ ಆಯೋಗದಿಂದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ

Published

on

ಬೆಂಗಳೂರು:ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ಭರದ ಸಿದ್ಧತೆ ಆರಂಭಿಸಿದೆ. ಈ ಸಂಬAಧ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸುತ್ತೋಲೆ ರವಾನಿಸಿರುವ ಆಯೋಗ, ಚುನಾವಣಾಧಿಕಾರಿಗಳು (ಆರ್‌ಒ) ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು (ಎಆರ್‌ಒ) ತಕ್ಷಣವೇ
ನಿಯೋಜಿಸಿ, ನವೆಂಬರ್ 16ರೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಒಂದು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಉಪವಿಭಾಗಾಧಿಕಾರಿ (ಎಸಿ) ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ಗುರುತಿಸಿ ನೇಮಿಸಬೇಕಾಗುತ್ತದೆ.
ಒಂದು ವೇಳೆ ತಾಲೂಕಿನಲ್ಲಿ 10ಕ್ಕಿಂತ ಹೆಚ್ಚಿನ ಕೇತ್ರಗಳಿದ್ದರೆ ಇಬ್ಬರು
ಕ್ಷೇತ್ರಗಳಿದ್ದರೆ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಪ್ರತಿಯೊಬ್ಬ ಚುನಾವಣಾಧಿಕಾರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸಲು ತಹಸೀಲ್ದಾ‌ರ್ ಹುದ್ದೆಗೆ ತತ್ಸಮಾನವಾದ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬೇಕು, ಆದರೆ ಸ್ಥಳೀಯ ತಾಲೂಕು ತಹಸೀಲ್ದಾರರನ್ನು ಈ ಹುದ್ದೆಗೆ ಪರಿಗಣಿಸುವಂತಿಲ್ಲ. ಆಯಾ ಉಪವಿಭಾಗದ ಕೇಂದ್ರಸ್ಥಾನದ ತಾಲೂಕಿನ
ಕೇಂದ್ರಸ್ಥಾನದ ತಾಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಉಪವಿಭಾಗಾಧಿಕಾರಿಗಳನ್ನೇ ಕಡ್ಡಾಯವಾಗಿ ಚುನಾವಣಾಧಿಕಾರಿಯನ್ನಾಗಿ ನಿಯೋಜಿಸಬೇಕು ಎಂದು ಆಯೋಗ ಸ್ಪಷ್ಟಪಡಿಸಿದೆ.

ತಾಲೂಕು ಪಂಚಾಯಿತಿಗೆ ಸಂಬAಧಿಸಿದAತೆ ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲೂಕು ತಹಸೀಲ್ದಾರರನ್ನು ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ಗುರುತಿಸಿ ನೇಮಕ ಮಾಡಬೇಕು. ಇವರಿಗೆ
ಸಹಾಯಕರಾಗಿ ಒಬ್ಬ ಉಪ ತಹಸೀಲ್ದಾ‌ರ್ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬೇಕು. ತಾಲೂಕು ಕೇಂದ್ರಸ್ಥಾನದ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಸ್ಥಳೀಯ ತಹಸೀಲ್ದಾರರನ್ನೇ ಕಡ್ಡಾಯವಾಗಿ ಚುನಾವಣಾಧಿಕಾರಿಗಳನ್ನಾಗಿ ನೇಮಿಸತಕ್ಕದ್ದು ಹಾಗೂ ನೇಮಕಗೊಂಡ ಪ್ರತಿಯೊಬ್ಬ ಅಧಿಕಾರಿ ಯಾವ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದಾರೆ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟವಾಗಿ ನಮೂದಿಸಬೇಕೆಂದು ನಮೂದಿಸಬೇಕೆಂದು ತಿಳಿಸಲಾಗಿದೆ.
ಆದಷ್ಟು ಶೀಘ್ರವಾಗಿ ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಯಾವುದೇ ರೀತಿಯ ವಿಳಂಬಕ್ಕೆ ಆಸ್ಪದ ನೀಡದೆ, ನಿಗದಿತ ನಮೂನೆಗಳಲ್ಲಿ ಸಿದ್ಧಪಡಿಸಿದ ಅಧಿಕಾರಿಗಳ ನೇಮಕಾತಿ ಪಟ್ಟಿಯ ಪ್ರಸ್ತಾವನೆಯನ್ನು 2026ರ ನವೆಂಬರ್ 16ರೊಳಗೆ ಆಯೋಗದ ಅನುಮೋದನೆಗೆ ಸಲ್ಲಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ
ಅಧೀನ ಕಾರ್ಯದರ್ಶಿ ಪಿ.ಎಸ್. ಮರಬಳ್ಳಿ ಅವರು ಆದೇಶಿಸಿದ್ದಾರೆ.
 

 

Continue Reading
Click to comment

Leave a Reply

Your email address will not be published. Required fields are marked *

Advertisement