Connect with us

ಇತ್ತೀಚಿನ ಸುದ್ದಿಗಳು

ದ್ವಾರಕಾ ಕರ್ಮಶಿಯಲ್ಸ್ ಲೋಕಾರ್ಪಣದ ಆಮಂತ್ರಣ ಪತ್ರ ಬಿಡುಗಡೆ

Published

on

ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ.ನ ನೂತನ ಕಟ್ಟಡ “ದ್ವಾರಕಾ ಕಮರ್ಶಿಯಲ್ಸ್” ಇದೇ ಬರುವ ನ.27ರಂದು ಲೋಕಾರ್ಪಣಗೊಳ್ಳಲಿದ್ದು, ಇದರ ಅಂಗವಾಗಿ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ 13-11-2027 ಬೆಳಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರ ಉಪಸ್ಥಿತಿಯಲ್ಲಿ ದೇವಳದ ಗರ್ಭಗುಡಿ ಮುಂಭಾಗ ಕಾರ್ಯಕ್ರಮ ಯಶಸ್ವಿಗೆ ವಿಶೇಷವಾಗಿ ಪ್ರಾರ್ಥಿಸಿ, ಪ್ರಸಾದ ಸ್ವೀಕರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಭಟ್, ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ, ಸಂಸ್ಥೆಯ ಡೈರೆಕ್ಟರ್ ಶ್ರೀಮತಿ ಅಶ್ವಿನಿ ಎನ್.,ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಅಮೃತಕೃಷ್ಣ ಎನ್., ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಗಣರಾಜ ಕುಂಬ್ಳೆ ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಯೋಗರತ್ನ ದೇಲಂಪಾಡಿ ಗೋಪಾಲಕೃಷ್ಣ ಭಟ್  ಅವರು, “ಉಜ್ಜೀವನ ಸಹಿತ ಅನೇಕ ಬಡಾವಣೆ ನಿರ್ಮಿಸಿ ಈಗಾಗಲೇ ದ್ವಾರಕಾ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಇದೀಗ ತನ್ನ ಸ್ವಂತ ಕಚೇರಿ ಕಟ್ಟಡದ ಕನಸು ನನಸಾಗುತ್ತಿದ್ದು, ಈ ಕಾರ್ಯಕ್ರಮವು ಯಶಸ್ವಿಯಾಗಲಿ” ಎಂದು ಶುಭ ಹಾರೈಸಿದರು.
 

ಇದೇ ವೇಳೆ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, “ದ್ವಾರಕಾ ಸಂಸ್ಥೆಯ ಈ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಗಳಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿ” ಎಂದು ಕರೆ ನೀಡಿದರು.

ದ್ವಾರಕಾ ಕಮರ್ಶಿಯಲ್ಸ್ ಲೋಕಾರ್ಪಣದ ದಿನ ಪ್ರಧಾನ ಕಛೇರಿಯ ಜೊತೆಗೆ ಎಸ್ಕಲೇಟರ್, ದ್ವಾರಕಾ ಮಂಗಲ್ ಸ್ಟೋರ್ ಲೋಕಾರ್ಪಣಗೊಳ್ಳಲಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement