Published
7 hours agoon
By
Akkare News
ಶನಿವಾರ ಸಂಜೆ ಸಂಪ್ಯದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಗ್ರಾಮ ಮಟ್ಟದಲ್ಲಿ ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.
ಹರೀಶ್ ಪೂಂಜಾ ಅವರು ಹೇಳಿಕೆ ನೀಡಿರುವುದರಿಂದ ಈ ಕರೆಯನ್ನು ನೀಡುತ್ತಿದ್ದೇನೆ. ಇದರ ಹೊರತಾಗಿ ಯಾವುದೇ ಕೀಳು ಮಟ್ಟದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ಅದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದ ಅವರು, ಸೋಮವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ತಾನಿರುತ್ತೇನೆ. ನನ್ನ ಸಾಧನೆಗಳ, ಅನುದಾನದ ವಿವರವನ್ನು ಬರೆದು ಸಿದ್ಧನಿರುತ್ತೇನೆ. ನೀವು ಕೂಡ ನಿಮ್ಮ ಸಾಧನೆ, ಅನುದಾನದ ವಿವರಗಳನ್ನು ಬರೆದುಕೊಂಡು ಬನ್ನಿ. ಇಬ್ಬರು ಬರೆದ ವಿವರಗಳನ್ನು ಮಾಧ್ಯಮಗಳ ಮುಂದೆ ಇಡುವ. ನಮ್ಮಿಬ್ಬರ ನಡುವೆ ಯಾವುದೇ ಚರ್ಚೆ ಬೇಡ. ಮಾಧ್ಯಮದವರೇ ನಿರ್ಧರಿಸುತ್ತಾರೆ. ಬಳಿಕ ಕಾಫಿ ಕುಡಿದು, ತೆರಳಿದರಾಯಿತು ಎಂದು ಹರೀಶ್ ಪೂಂಜಾ ಅವರಿಗೆ ಕರೆ ನೀಡಿದರು.
ಸುಳ್ಳು ಪ್ರಚಾರ ಮಾಡುವಾಗ ನನಗೆ ಯಾವುದೇ ಬೇಸರ ಆಗಿಲ್ಲ. ಯಾಕೆಂದರೆ ನನ್ನ ಉದ್ದೇಶ ಒಂದೇ – ಅದು ಅಭಿವೃದ್ಧಿ. ನಾನು ಇನ್ನೊಂದು ಶಾಸಕರ ಬಗ್ಗೆ ಯಾವುದೇ ವಿಚಾರದ ಬಗ್ಗೆಯೂ ಮಾತನಾಡಿಲ್ಲ. ಬೆಳ್ತಂಗಡಿಗೆ ಹೋದಾಗ ಹರೀಶ್ ಪೂಂಜಾರಿಗೆ ಕರೆ ಮಾಡಿ ಮಾತನಾಡುತ್ತಿದ್ದೆ. ಎಲ್ಲಾ ಕ್ಷೇತ್ರದಲ್ಲೂ ಶಾಸಕರಿದ್ದಾರೆ. ಎಲ್ಲರಿಗೂ ಸಮಾನ ಅಧಿಕಾರ ಇರುವುದು ತಾನೇ?
ಅಭಿವೃದ್ಧಿ ಆಗಿದೆ ಎಂದರೆ ಮಾತ್ರ ಮತ ನೀಡಿ: ನಾವು ಯಾರಿಗೂ ಅನ್ಯಾಯ ಮಾಡಲು ಹೋಗುವುದಿಲ್ಲ. ಬೈಯಲು ಸಾವಿರ ಇದೆ. ಆದರೆ ಜನರು ನಿರ್ಧಾರ ಮಾಡಲಿ. ಹಿಂದಿನ ಹದಿನೈದು ವರ್ಷಗಳ ಅವಧಿಯ ಕೆಲಸಗಳನ್ನು ತುಲನೆ ಮಾಡಿ ನೋಡಲಿ. ನನ್ನ ಅವಧಿಯಲ್ಲಿ ಅಭಿವೃದ್ಧಿ ಆಗಿದೆ ಎಂದರೆ ಮಾತ್ರ ನಮಗೆ ಮತ ನೀಡಿ. ಹಾಗೆಂದು ನಿಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಮೋಸ ಮಾಡಬೇಡಿ. ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತಾ: ಮಠ – ಮಂದಿರ, ಚರ್ಚ್, ಮಸೀದಿಗಳಿಗೆ ಯಾರು ಅನುದಾನ ನೀಡಿದ್ದಾರೆ. ಆದರೆ ನಾವು ತಲಾ ಒಂದು ಕೋಟಿ ರೂ.ನಂತೆ ನೀಡಿದ್ದೇವೆ. ಇದನ್ನೆಲ್ಲಾ ನೋಡಿ, ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಆದರೆ ಮಹಾಲಿಂಗೇಶ್ವರ ದೇವರು ನೋಡ್ತಾ ಇದ್ದಾರೆ. ನಾವು ತಪ್ಪು ಮಾಡಿದರೆ ನಮಗೆ, ನೀವು ತಪ್ಪು ಮಾಡಿದರೆ ನಿಮಗೆ ಶಿಕ್ಷೆ ಖಂಡಿತಾ ಎಂದರು.

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬಿಜೆಪಿಗರಿಗೆ ಬೇರೆ ಕೆಲಸ ಇಲ್ಲ. ಭಜನೆ ಮಾಡಿ ಅಜನೆ ಮಾಡಲು ಗ್ರಾಮ ಗ್ರಾಮಕ್ಕೆ ಹೋಗ್ತಾ ಇದ್ದಾರೆ. ಅವರಿಗೆ ಸ್ಪಷ್ಟ ನಿರ್ದೇಶನ ಇದೆಯಂತೆ. 25 ಜನ ಪುತ್ತೂರಿನಿಂದ ಹೋಗಬೇಕಂತೆ. ಯಾಕೆಂದರೆ ಗ್ರಾಮದಲ್ಲಿ ಐದು ಜನವೂ ಇರುವುದಿಲ್ಲ. ಇನ್ನು ಪರಿವಾರದವರಿಗೆ ಗತಿಗೋತ್ರ ಇಲ್ಲದಂತಾಗಿದೆ. ಅಶೋಕ್ ಕುಮಾರ್ ರೈ ಅವರ ಕೆಲಸ ವೈಖರಿಯಿಂದಾಗಿ ಬಿಜೆಪಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದರು. 



ನಾಗರಹಾವನ್ನು ಕೊಂದರು: ಅರಿಯಡ್ಕದಲ್ಲಿ ನಾಗರಹಾವೊಂದು ಬಿಜೆಪಿಗರನ್ನು ಕಾರ್ಯಕ್ರಮ ಮಾಡಲು ಬಿಡಲಿಲ್ಲ. ಹಿಂದುತ್ವ ಮಾತನಾಡುವ ಇವರು, ಕೊನೆಗೆ ನಾಗರಹಾವನ್ನು ಕೊಂದು ಹೋದರು. ಎಲ್ಲಾ ಕಡೆಯೂ ಅವರಿಗೆ ಶಾಪವಾಗಿ ಪರಿಣಮಿಸಿದೆ ಎಂದರು. ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಕಾಂಗ್ರೆಸಿನ ಅಭಿವೃದ್ಧಿ ಪರ್ವ ನೋಡಿ ಬಿಜೆಪಿಗರಿಗೆ ಈಗ ಎಚ್ಚರಿಕೆ ಆಗಿದೆ. ಅದಕ್ಕಾಗಿ ಶಾಸಕ ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅದು ಹೇಗೆ ಸುಳ್ಳು ಹೇಳುತ್ತಾರೋ, ನಮಗೆ ಅದನ್ನು ಪುನರುಚ್ಚರಿಸಲು ಕಷ್ಟವಾಗುತ್ತದೆ ಎಂದರು. ಡಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರು ಮಾತನಾಡಿ, ವಯಸ್ಸು ಕತ್ತೆಗೆ ಆಗುತ್ತೇ ಅಂದಿರಿ. ಅದಕ್ಕೆ ಅನುಭವವೂ ಆಗುತ್ತದೆ. ಆದರೆ ಮನುಷ್ಯತ್ವ ಮುಖ್ಯ. ಬೆಳ್ತಂಗಡಿಯ ದೇವಸ್ಥಾನವೊಂದರ ಬ್ರಹ್ಮಕಲಶಕ್ಕೆ ಜಾಗ ನೀಡಿದ ಮುಸ್ಲಿಂರು, ಆ ಕಾರ್ಯಕ್ರಮಕ್ಕೆ ಬರಬಾರದು ಅನ್ತಾರೆ ಬೆಳ್ತಂಗಡಿ ಶಾಸಕರು. ಹಾಗಾದ್ರೆ ಮನುಷ್ಯತ್ವ ಎಲ್ಲಿದೆ ಎಂದು ಪ್ರಶ್ನಿಸಿದರು. ಅಶೋಕ್ ಕುಮಾರ್ ರೈ ಅವರ ಚೈತ್ರ ಯಾತ್ರೆ ನಿಲ್ಲುವುದಿಲ್ಲ. ಈ ಅವಧಿಯ ಉಳಿದ ಸಮಯ, ಮುಂದಿನ ಅವಧಿಯಲ್ಲೂ ಮುಂದುವರಿಯಲಿದೆ ಎಂದರು. ಹೊಟ್ಟೆಕಿಚ್ಚಿನ ಪರಿಣಾಮ ಸುಳ್ಳು ಆರೋಪ: ಅರ್ಷದ್ ದರ್ಬೆ ಮಾತನಾಡಿ, ನಮ್ಮ ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಮಾತನಾಡುವ ಬಿಜೆಪಿಗರು, ಬೆಳ್ತಂಗಡಿ ಶಾಸಕರು ಅವರು ಮಾಡಿದ ಕೆಲಸಗಳ ಬಗ್ಗೆ ತಿಳಿದುಕೊಳ್ಳಬೇಕು. ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಸೋಮವಾರ ಬನ್ನಿ. ಅವರು ಮಾಡುವ ಕೆಲಸಗಳನ್ನು ನೀವು ನೋಡಿ ಕಲಿತುಕೊಳ್ಳಬೇಕು. ಇದು ಹೊಟ್ಟೆಕಿಚ್ವಿನ ಪರಿಣಾಮವಾಗಿ ಸುಳ್ಳು ಆರೋಪಗಳ ಸುರಿಮಳೆ ಮಾಡುತ್ತಾ ಇದ್ದಾರೆ. ಬಿಜೆಪಿಗರಿಗೆ ಇಂತಹ ಶಾಸಕರನ್ನು ಉಳಿಸಿಕೊಳ್ಳುವ ಭಾಗ್ಯ ಇಲ್ಲ. ಹಾಗೆಂದು ಈಗ ವಿರೋಧ ಮಾಡಲು ಬರಬೇಡಿ. ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುವ ಉತ್ತಮ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ಆರ್ಯಾಪು ಗ್ರಾಪಂ ಮಾಜಿ ಸದಸ್ಯ ರಮೇಶ್ ರೈ ಡಿಂಬ್ರಿ ಮಾತನಾಡಿ, ವಿಕಾಸ್ ಪುತ್ತೂರು ಅವರು ರೈ ಪದವನ್ನು ರೈಲು ಎಂದು ಹೇಳಿ ಬಂಟ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.ಭಗವದ್ಗೀತೆ ಓದಿ ಶ್ರೀಪ್ರಸಾದ್ ಪಾಣಾಜೆ ಹಾಗೂ ರಾಷ್ಟ್ರಮಟ್ಟದ ಸಾಧಕಿ ಡಿಂಪಲ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಬಾಬು ಮರಿಕೆ ಮಾತನಾಡಿ, ಸುಳ್ಳಿನಿಂದಲೇ ದೇಶ ಕಟ್ಟುತ್ತಿರುವ ಬಿಜೆಪಿಗರು ಶಾಸಕ ಅಶೋಕ್ ಕುಮಾರ್ ರೈ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸೋಲಿಸಲು ಮಾಡಿರುವ ಷಡ್ಯಂತ್ರ. ತಾನು ಶಾಸಕನಾದಾಗ ಅದೆಷ್ಟೋ ಕೆಲಸಗಳನ್ನು ತಲೆಯಲ್ಲಿ ಹೊತ್ತು ಬಂದಿದ್ದಾರೆ ಎನ್ನುವುದು ಅವರು ಮಾಡುವ ಕೆಲಸದಿಂದ ತಿಳಿಯುತ್ತದೆ. ಇದೀಗ ರಾಜ್ಯ ಮಾತ್ರವಲ್ಲ ದೇಶದಲ್ಲೇ ಮಿಂಚುತ್ತಿದ್ದಾರೆ. ಇಂತಹ ಸಂದರ್ಭ ಶಾಸಕರನ್ನು ಹೊಗಳಬೇಕು. ಅದುಬಿಟ್ಟು ಅಪ ಪ್ರಚಾರ ಮಾಡುವುದು ಸರಿಯಲ್ಲ ಎಂದರು. ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ ಕೈಕಾರ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.