Published
2 months agoon
By
Akkare News
ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಪಕ್ಷದ ಕಾರ್ಯಕರ್ತರು ಎಸ್.ಐ.ಆರ್ ಕಾರ್ಯಾಗಾರದಲ್ಲಿ ಸಕ್ರೀಯವಾಗಿ ಕಾರ್ಯಪ್ರವೃತ್ತರಾಗಬೇಕು, ಪಕ್ಷದ ವತಿಯಿಂದ ಗ್ರಾಮೀಣ ಮಟ್ಟದಲ್ಲಿ ಇಂತಹ ಮಾಹಿತಿ ಕೇಂದ್ರ ಮಾಡಿದ್ದು ಪ್ರಥಮವಾಗಿದೆ ಎಂದು ಹೇಳಿ ಕೆದಂಬಾಡಿ ಕಾಂಗ್ರೆಸ್ ನಾಯಕರಿಗೆ ಹಾಗೂ ಬೂತ್ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಿದರು.
ಬ್ಲಾಕ್ ಮಟ್ಚದ ತರಬೇತುದಾರ ಸಂತೋಷ್ ಭಂಡಾರಿ ಮಾಹಿತಿ ನೀಡಿದರು. ಪಕ್ಷದ ಹಿರಿಯ ನಾಯಕ ಚಂದ್ರಹಾಸ ರೈ ಬೋಳೋಡಿ, ಸಿದ್ದೀಕ್ ಸುಲ್ತಾನ್ ಶುಭ ಹಾರೈಸಿದರು. ಪಕ್ಷದ ನಾಯಕರಾದ ಮನೋಹರ್ ರೈ ಎಂಡೆಸಾಗು , ಸದಾಶಿವ ರೈ, ಭಾಸ್ಕರ ನಾಯ್ಕ್ ಬೋಳೋಡಿ, ಅಬ್ದುಲ್ ಖಾದರ್ ಮೇರ್ಲ, ಸೀತರಾಮ ರೈ ಬಾಳಯ, ಗೋಪಾಲ ರೈ ಚಾವಡಿ, ನವೀದ್ ನಿಡ್ಯಾನ, ಶಾಫಿ ಬೇರಿಕೆ ಉಪಸ್ಥಿತರಿದ್ದರು. ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು ಸ್ವಾಗತಿಸಿ ವಂದಿಸಿದರು.
ಈ ಸಮಯದಲ್ಲಿ ನವೀನ್ ಶೆಟ್ಟಿ ಅಳಕೆ,ತಂಡದ ನಿರ್ದೇಶಕರು ಸ್ವರಾಜ್ ಶೆಟ್ಟಿ, ನಾಟಕ ರಚನೆಗಾರ ಕೀರ್ತನ್ ಭಂಡಾರಿ,ಪ್ರೇಮ್ ಶೆಟ್ಟಿ, ಶೈಲಾ ಶ್ರೀ ಮುಲ್ಕಿ, ಮೊದಲಾದ ಗಣ್ಯರು ಹಾಗೂ ತಂಡದ ಎಲ್ಲಾ ಕಲಾವಿದರು ಉಪಸ್ಥಿತರಿದ್ದರು.