Connect with us

ಇತರ

ಪ್ರತಿಷ್ಠಿತ ‘ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ’ ಪುರಸ್ಕೃತ ‘ಲ್ಯಾಡರ್ ಮ್ಯಾನ್ ಶ್ರೀ ಕೇಶವ ಅಮೈ’ ಅವರಿಗೆ ಪುತ್ತೂರಿನಲ್ಲಿ ಭವ್ಯ ಸ್ವಾಗತ*

Published

on

​ಪುತ್ತೂರು:* ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾರತ ಸರ್ಕಾರದ ಉಪ ರಾಷ್ಟ್ರಪತಿಗಳಿಂದ ಹಾಗೂ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಪೂಜನೀಯ ಮಠಾಧಿಪತಿಗಳು ಗೌರವಾನ್ವಿತ ವಿವಿಧ ಮಂತ್ರಿ ಮಾನ್ಯರಿಂದ ಪ್ರತಿಷ್ಠಿತ “ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ”ಯನ್ನು ಸ್ವೀಕರಿಸಿ ಪುತ್ತೂರಿಗೆ ಆಗಮಿಸಿದ ಎಸ್‌‌.ಆರ್.ಕೆ. ಲ್ಯಾಡರ್ಸ್‌ನ ಮಾಲೀಕರು ಹಾಗೂ ಪ್ರಸಿದ್ಧ ಉದ್ಯಮಿ-ಸಂಶೋಧಕರಾದ *ಶ್ರೀ ಕೇಶವ ಅಮೈ * ಅವರಿಗೆ ನಗರದ ದರ್ಬೆ ವೃತ್ತದ ಬಳಿ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯವಾಗಿ ಸ್ವಾಗತಿಸಿ, ಗೌರವಿಸಲಾಯಿತು.

ಕೃಷಿ ಕ್ಷೇತ್ರದಲ್ಲಿ ಅವರು ನಡೆಸಿರುವ ಅಪೂರ್ವ ಸಂಶೋಧನೆ ಹಾಗೂ ಸಾಧನೆಗಳನ್ನು ಗುರುತಿಸಿ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನವು ಈ ಬಾರಿಯ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪ್ರಶಸ್ತಿ ಪಡೆದು ಪುತ್ತೂರಿಗೆ ಮರಳಿದ ಸಾಧಕನನ್ನು ಬರಮಾಡಿಕೊಳ್ಳಲು ಪುತ್ತೂರಿನ ದರ್ಬೆ ವೃತ್ತದ ಬಳಿ ನೂರಾರು ಅಭಿಮಾನಿಗಳು ಹಾಗೂ ಪ್ರಮುಖರು ಜಮಾಯಿಸಿದ್ದರು.

ಇದೇ ಸಂದರ್ಭದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೇಶವ ಅಮೈ ಅವರಿಗೆ ಕನ್ನಡದ ಹೆಮ್ಮೆಯ ಸಂಕೇತವಾದ *ಕನ್ನಡ ಶಾಲು* ಹೊದಿಸಿ, ಸಾಂಪ್ರದಾಯಿಕ *ಕನ್ನಡ ಪೇಟವನ್ನು* ಮುಡಿಗೇರಿಸುವ ಮೂಲಕ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಳೆದ 27 ವರ್ಷಗಳಿಂದ ಕೃಷಿಕರ ಶ್ರಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಯಂತ್ರೋಪಕರಣಗಳನ್ನು ಆವಿಷ್ಕರಿಸಿ, ಕೃಷಿ ರಂಗಕ್ಕೆ ಅಪ್ರತಿಮ ಕೊಡುಗೆ ನೀಡಿರುವ ಕೇಶವ ಅಮ್ಮೆ ಅವರ ಸಾಧನೆ ಪುತ್ತೂರಿಗೆ ಹೆಮ್ಮೆಯ ತಂದಿದೆ. ಅವರು ಕೇವಲ ಉದ್ಯಮಿಯಾಗಿರದೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರ ಸೇವೆಗೆ ಈ ಪ್ರಶಸ್ತಿ ಅತ್ಯಂತ ಸೂಕ್ತವಾಗಿದೆ.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,ಎಸ್‌‌.ಆರ್.ಕೆ. ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಮುಖಂಡರು, ರೋಟರಿ ಕ್ಲಬ್ಬಿನ ಪದಾಧಿಕಾರಿಗಳು, ವರ್ತಕರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದು ಲ್ಯಾಡರ್ ಮ್ಯಾನ್ ಎಂಬ ಹೆಸರು ಗಳಿಸಿದ ಸಾಧಕನಿಗೆ ಶುಭ ಹಾರೈಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version