Published
4 hours agoon
By
Akkare News
ಓಲ್ಡ್ ಮಾಂಕ್ ರಮ್, ರಾಯಲ್ ಚಾಲೇಂಜ್ ಸೇರಿದಂತೆ ಹಲವು ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್‌ಗಳ ಪ್ರಿಯರಿಗೆ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಶಾಕ್ ನೀಡಿದೆ. ಹಲವು ಮದ್ಯದ ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಹಾಗೂ ಬಣ್ಣಗಳನ್ನು ಬೆರೆಸಿ ಗ್ರಾಹಕರಿಗೆ ದಾರಿತಪ್ಪಿಸುವ ಮಾಹಿತಿ ನೀಡಿ ಮೋಸ ಮಾಡುತ್ತಿರುವುದು ಎಫ್‌ಎಸ್‌ಎಸ್‌ಎಐ ನಡೆಸಿದ ತಪಾಸಣೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಪ್ರಮುಖ ಬ್ರ್ಯಾಂಡ್‌ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ.