Connect with us

ಇಂದಿನ ಕಾರ್ಯಕ್ರಮ

ರೋಟರಿ ಕ್ಲಬ್ ಪುತ್ತೂರು ಪೂರ್ವ ವತಿಯಿಂದ ಸಾಂದೀಪನಿ ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಾಜೆಕ್ಟರ್ ಕೊಡುಗೆ :

Published

on

ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ದಿನಾಂಕ 10/8/26ರಂದು ರೋಟರಿ ಕ್ಲಬ್ ಪುತ್ತೂರು ಪೂರ್ವ ಇವರು ಕೊಡುಗೆಯಾಗಿ ನೀಡಿದ ಕಂಪ್ಯೂಟರ್ ಮತ್ತು ಪ್ರಾಜೆಕ್ಟರ್ ನ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ, Rotarian ರವಿ ಕುಮಾರ್ ರೈ,ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಪೂರ್ವ Rotarian ಜಿ ಕೆ ಭಟ್, ನಿವೃತ್ತ ಸೇನಾನಿ ಕರ್ನಲ್ Rotarian ಜಯಂತ್ ಬಾಯಾರ್ ಕಾರ್ಯದರ್ಶಿ ರೋಟರಿ ಕ್ಲಬ್ ಪುತ್ತೂರು ಪೂರ್ವ, ಶಾಲಾ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯ ಜೊತೆ ಕಾರ್ಯದರ್ಶಿಗಳಾದ ಶ್ರೀ ಸುಬ್ರಾಯ ಬಿ ಎಸ್ ಶಾಲಾ ಸದಸ್ಯರಾದ ಶ್ರೀ ವೆಂಕಟ ಕೃಷ್ಣ ಕೆ ಕೆ ಶಾಲಾ ಮುಖ್ಯ ಗುರುಗಳಾದ ಶ್ರೀ ಪ್ರಸನ್ನ ಕೆ ಹಾಗೂ ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಂಪ್ಯೂಟರನ್ನು ಹಸ್ತಾಂತರಿಸಿ ಮಾತನಾಡಿದ rotarian ಶ್ರೀ ರವಿಕುಮಾರ್ ರವರು ನಮ್ಮ ರೋಟರಿ ಕ್ಲಬ್ ಪುತ್ತೂರು ಪೂರ್ವ ಹಲವಾರು ಸಮಾಜಮುಖಿ ಕೆಲಸ, ಆರೋಗ್ಯ, ಅಂಗನವಾಡಿ ಕೇಂದ್ರಗಳಿಗೆ ಸಹಾಯ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಇತ್ಯಾದಿ ಸ್ವಯಂ ಇಚ್ಛೆಯಿಂದ ಹಲವಾರು ವರುಷಗಳಿಂದ ಕೊಡುಗೆಗಳನ್ನು ನೀಡಿಕೊಂಡು ಬರುತಿದ್ದು ಇಂತಹ ಯೋಜನೆಗಳಲ್ಲಿ ಶಾಲೆಗಳಿಗೆ ಸಹಕಾರ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ದೇಶದ ರಕ್ಷಣೆಯನ್ನು ಮಾಡಿದ ಹಿರಿಯರಾದ ನಮ್ಮ ಜಿ ಕೆ ಭಟ್ ರವರು ಕಂಪ್ಯೂಟರ್ ಗುಣಮಟ್ಟವನ್ನು ಗಮನಿಸಿ ಅತ್ಯಂತ ಗುಣಮಟ್ಟದ ಕಂಪ್ಯೂಟರ್ ಮತ್ತು ಪ್ರಾಜೆಕ್ಟರ್ ನ್ನು ದಾನ ವಾಗಿ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟು ಕೊಂಡ ನಿಮ್ಮ ಸೇವೆಗೆ ನಾನು ಆಭಾರಿಯಾಗಿದ್ದೇನೆ. ನಿಮ್ಮ ಕೊಡುಗೆ ವಿದ್ಯಾಕ್ಷೇತ್ರದಲ್ಲಿ ಉಪಯೋಗವಾಗಿ ಈ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ಉತ್ತಮ ನಾಯಕರಾಗಿ ಹೊರಹೊಮ್ಮಲಿ ಎಂದರು. ದಾನಿಗಳಾದ rotarian ಜಿ ಕೆ ಭಟ್ ರವರು ಮಾತನಾಡಿ ತನ್ನ ಮಗನಿಂದಾಗಿ ತಾನು ಈ ಶಾಲೆಗೆ ಕೊಡುಗೆಯನ್ನು ನೀಡುವಂತಾಯಿತು ಗ್ರಾಮೀಣ ಶಾಲೆಯು ಅಭಿವೃದ್ಧಿಯನ್ನು ಹೊಂದಬೇಕು ಎನ್ನುವ ನನ್ನ ಮಗನ ಇಚ್ಛೆಯಂತೆ ನಾನು ಈ ಶಾಲೆಗೆ ಕೊಡುಗೆಯನ್ನು ನೀಡುವಂತಾಯಿತು. ನಾನು ವೈಯಕ್ತಿಕವಾಗಿ ನನ್ನ ಹೆಂಡತಿ ಶ್ರೀಮತಿ ಉಷಾ ಭಟ್ ಹಾಗೂ ನನ್ನ ಮಗ ಶಶಿಧರ್ ಭಟ್ ನ ಪರವಾಗಿ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ದೀಪ ಬೆಳಗಿಸಿ ಮಾತನಾಡಿದ ಶಾಲಾಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ರೋಟರಿಯವರಿಗೆ ವಿಶೇಷ ವಂದನೆಗಳನ್ನು ತಿಳಿಸುತ್ತಾ ಶಾಲೆಗೆ ಹೆಚ್ಚಿನ ಕೊಡುಗೆಗಳು ಬರಲು ಭಗವಂತನ ಅನುಗ್ರಹ ಬೇಕು ಜಿ ಕೆ ಭಟ್ ರವರು ಅವರ ಮಗನ ಮೂಲಕ ಈ ಶಾಲೆಯ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ನ ಕೊಡುಗೆ ನೀಡಲು ಮುಂದೆ ಬಂದಿದ್ದು ಅದನ್ನು ಸ್ವೀಕರಿಸಲು ನಮಗೂ ಸಂತೋಷ ವಾಗಿದ್ದು ಅವರಿಗೆ ಶ್ರೀ ಕೃಷ್ಣನು ಆಯುರಾರೋಗ್ಯ ಕರುಣಿಸಲಿ ಎಂದರು. ಶಾಲಾ ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ಶಾಲಾ ಸಹಶಿಕ್ಷಕರಾದ ಶ್ರೀ ರವಿಶಂಕರ್ ರವರು ಕಾರ್ಯಕ್ರಮ ನಿರೂಪಿಸಿದರು ಶಾಲಾ ಮುಖ್ಯ ಗುರುಗಳು ಧನ್ಯವಾದಗೈದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version