ಪುತ್ತೂರು, ಜುಲೈ 27: ಪುತ್ತೂರು ವಕೀಲರ ಸಂಘದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸಂತೋಷ್ ಕುಮಾರ್ ಕೆ., ಉಪಾಧ್ಯಕ್ಷ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಸ್ವಾತಿ ಜಗನ್ನಾಥ ರೈ, ಕೋಶಾಧಿಕಾರಿ ಭಾರತಿ ಎ. ಹಾಗೂ ಜತೆ ಕಾರ್ಯದರ್ಶಿ ಉದಯಚಂದ್ರ ಕರಂಬಾರು ಅವರನ್ನು ಇಂದು ಪುತ್ತೂರಿನ ಆನೆಮಜಲಿನ ವಕೀಲರ ಕಚೇರಿಯಲ್ಲಿ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಬ್ರಿಗೇಡ್ (ರಿ.) ಗೌರವಾಧ್ಯಕ್ಷ ಡಾ. ರಾಜಾರಾಮ್, ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ಪ್ರಧಾನ ಕಾರ್ಯದರ್ಶಿ ರಂಜಿತ್ ಸುವರ್ಣ, ಗೌರವ ಸಲಹೆಗಾರರಾದ ದೇವಾನಂದ ಹಾಗೂ ಪದ್ಮನಾಭ ಪೂಜಾರಿ, ಉಪಾಧ್ಯಕ್ಷರಾದ ಅಣ್ಣಿ ಪೂಜಾರಿ ಮತ್ತು ಮೋಹನ್ ಗುರ್ಜಿನಡ್ಕ, ಕೋಶಾಧಿಕಾರಿ ಚಂದ್ರಶೇಖರ ಕಲ್ಲಗುಡ್ಡೆ, ಜತೆ ಕಾರ್ಯದರ್ಶಿ ಹರೀಶ್ ಬಂಗೇರ, ಕಾನೂನು ಸಲಹೆಗಾರ ಕುಮಾರನಾಥ್, ಸಲಹೆಗಾರ ಹರೀಶ್ ನಿಡ್ಪಳ್ಳಿ, ಸದಸ್ಯರಾದ ಕಿರಣ್, ಸುರೇಂದ್ರ, ಯತೀಶ್, ತೇಜಸ್, ನವೀನ್ ಸುವರ್ಣ ಉಪಸ್ಥಿತರಿದ್ದರು. ಅದೇ ವೇಳೆ ಹಿರಿಯ ವಕೀಲ ಜಗನ್ನಿವಾಸ್ ರಾವ್ ಹಾಗೂ ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಜಗನ್ನಾಥ್ ರೈ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದx ನೂತನ ಪದಾಧಿಕಾರಿಗಳು ಎಲ್ಲರ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿ, ವಕೀಲರ ಸಂಘದ ಅಭಿವೃದ್ಧಿ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಭರವಸೆ ವ್ಯಕ್ತಪಡಿಸಿದರು.