Connect with us

ಇಂದಿನ ಕಾರ್ಯಕ್ರಮ

ಕರಾವಳಿ ಭಾಗದ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟವರೇ ವೀರೇಂದ್ರ ಹೆಗ್ಗಡೆ.. ಯು ಟಿ ಖಾದರ್

Published

on

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರ ದೂರದೃಷ್ಟಿಯ ಯೋಜನೆಯ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ರೂಪಿಸಲ್ಪಟ್ಟ ಯೋಜನೆಗಳಿಂದ ಕರಾವಳಿ ಭಾಗದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀಯುತ ಯು ಟಿ ಖಾದರ್ ಹೇಳಿದರು ಅವರು ಆಗಸ್ಟ್ 16 ರವಿವಾರ ಪರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ ) ಬಂಟ್ವಾಳ ಇದರ ತುಂಬೆ ವಲಯದ ಪ್ರಗತಿ ಬಂದು ಸ್ವ- ಸಹಾಯ ಸಂಘಗಳ ಪರಂಗಿಪೇಟೆ,ಸುಜೀರ್, ತುಂಬೆ, ಕಳ್ಳಿಗೆ,ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಪದಾಧಿಕಾರಿ ಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.  ತನ್ನ ಕಾಲೇಜ್ ಕಲಿಕಾ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದನ್ನು ನೆನಪಿಸಿಕೊಂಡು ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯಕ್ಕೆ ಗೋಸ್ಕರ ಇದ್ದು ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಆರೋಗ್ಯದತ್ತ ಹೆಚ್ಚು ಗಮನಹರಿಸಿ ಖರೀದಿಸುವ ಆಹಾರ ಪದಾರ್ಥಗಳ ಬಗ್ಗೆ ನಿಗ ವಹಿಸುವಂತೆ ಸೂಚನೆ ನೀಡಿದರು. ಹಾಗೂ ಈಗಾಗಲೇ ಆರೋಗ್ಯ ಇಲಾಖೆಯ ಮೂಲಕ ಆಹಾರ ತಯಾರಿಸುವ ಕೇಂದ್ರಗಳ ಮೇಲೆ ನಿಗ ವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಾ ಭಿವೃದ್ಧಿ ಯೋಜನೆಯಿಂದ ಸಹಕಾರ ಪಡೆದು ವಿಶೇಷ ಸಾಧನೆ ಮಾಡಿದ ಸಂಘವನ್ನು, ಹಾಗೂ ವ್ಯಕ್ತಿಗಳನ್ನು ಸಚಿವರು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉಳ್ಳಾಕು ಮಗ್ನಂತಾಯಿ ಕ್ಷೇತ್ರ, ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ವಹಿಸಿದರು. ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ. ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆಯ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಖ್ಯಾತ ವಾಗ್ನಿ ಸಹನಾ ಕುಂದರ್ ಸೂಡ ಉಡುಪಿ, ಪದ್ಮ ಸರ್ವಿಸಸ್, ಬಿ.ಸಿ.ರೋಡು ಮಾಲಕ ಐತಪ್ಪ ಆಳ್ವ ಸುಜೀರುಗುತ್ತು, ಖ್ಯಾತ ಜ್ಯೋತಿಷ್ಯ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು,ಮಾಜಿ ತಾಲೂಕು ಪಂಚಾಯತ್ ಗಣೇಶ್ ಸುವರ್ಣ, ದೇವದಾಸ್ ಮುಖ್ಯ ಶಿಕ್ಷಕರು, ಶ್ರೀ ರಾಮ ಪ್ರೌಢಶಾಲೆ ಅರ್ಕುಳ, ಸದಾನಂದ ಆಳ್ವ ಕಂಪ, ಸದಸ್ಯರು, ಜನಜಾಗೃತಿ ವೇದಿಕೆ, ಭಾಸ್ಕರ ಚೌಟ, ಸದಸ್ಯರು, ಜನಜಾಗೃತಿ ವೇದಿಕೆ, ತಾರಾನಾಥ ಕೊಟ್ಟಾರಿ, ಸದಸ್ಯರು, ಜನಜಾಗೃತಿ ವೇದಿಕೆ, ರಮ್ಲಾನ್ ಮಾರಿಪಳ್ಳ, ಅಧ್ಯಕ್ಷರು ಗ್ರಾಮ ಪಂಚಾಯತ್ ಪುದು, ಸಮೀರಾ ಅಮನ್ ಗಾರ್ಮೆಂಟ್ಸ್ ಮೆಲ್ಕಾರ್, ಮೊದಲಾದವರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿ, ಪರಂಗಿಪೇಟೆ ಒಕ್ಕೂಟ ಸೇವಾ ಪ್ರತಿನಿಧಿ ಅಮಿತಾ ಸಾಧನ ವರದಿ ವಾಚಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಗೋಪಾಲಕೃಷ್ಣ ವಂದಿಸಿದರು.ಒಕ್ಕೂಟ ಸೇವಾ ಪ್ರತಿನಿಧಿಗಳಾದ ಅಮಿತಾ, ಮಲ್ಲಿಕಾ ಅನಿತಾ, ತುಳಸಿ, ಕುಸುಮಾವತಿ, ಪ್ರತಿಭಾ, ವನಿತಾ, ಸಹಕರಿಸಿದರು. ಕಾರ್ಯಕ್ರಮದಲ್ಲಿ ನಾಲ್ಕು ಒಕ್ಕೂಟಗಳ ನೂತನ ಅಧ್ಯಕ್ಷರುಗಳು, ಪದಾಧಿಕಾರಿಗಳು ನಿಕಟಪೂರ್ವ ಅಧ್ಯಕ್ಷರುಗಳು ಪದಾಧಿಕಾರಿಗಳು ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರುಗಳು ಭಾಗವಹಿಸಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version