Connect with us

ಇಂದಿನ ಕಾರ್ಯಕ್ರಮ

ಶಾಸಕ ಅಶೋಕ್ ಕುಮಾರ್ ರೈ ಕಚೇರಿಯಲ್ಲಿ ಇಂದಿನಿಂದ … ಮದ್ಯಾಹ್ನ ಉಚಿತ ಗಂಜಿ ಊಟ…!!!. ಫುಲ್ ರಶ್…!!!

Published

on

ಪುತ್ತೂರು: ಶಾಸಕ ಅಶೋಕ್ ರೈ ಅವರ ಕಚೇರಿಯಲ್ಲಿ ಪ್ರತೀ ಸೋಮವಾರ ಮಧ್ಯಾಹ್ನ ಗಂಜಿ ಊಟ ವಿತರಣೆ ಆರಂಭವಾಗಿದ್ದು ಆ. 31 ರ ಸೋಮವಾರದಂದು ಚಾಲನೆ ನೀಡಲಾಗಿದೆ. ವಾರದ ಪ್ರತೀ ಸೋಮವಾರ ಶಾಸಕರ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತದೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ಪ್ರತೀ ಸೋಮವಾರ ಸುಮಾಉ 500 ರಿಂದ 7೦೦ ಮಂದಿ ಸಾರ್ವಜನಿಕರು ಭಾಗವಹಿಸುತ್ತಿದ್ದಾರೆ. ಕಚೇರಿಗೆ ಬರುವ ಸಾರ್ವಜನಿಕರು ಮಧ್ಯಾಹ್ನದ ವೇಳೆ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಶಾಸಕರು ಮಧ್ಯಾಹ್ನ ಗಂಜಿ ಊಟವನ್ನು ಆರಂಭಿಸುವುದಾಗಿ ಹೇಳಿದ್ದರು.ಅದರಂತೆ ಇಂದಿನಿಂದ ಗಂಜಿ ವಿತರಣೆ ಆರಂಭವಾಗಿದೆ. ನನ್ನ ಬೇಟಿಗಾಗಿ ಕಚೇರಿಗೆ ಬರುವ ಸಾರ್ವಜನಿಕರು ಹಸಿವಿನಿಂದ ಮನೆಗೆ ತೆರಳಬಾರದು. ಕಚೇರಿಯಲ್ಲೇ ಗಂಜಿ ವ್ಯವಸ್ಥೆ ಮಾಡಿದ್ದೇನೆ. ಮುಂದೆ ನಾನು ಕಚೇರಿಯಲ್ಲಿರುವ ವೇಳೆ ಪ್ರತೀ ಸೋಮವಾರ ಮಧ್ಯಾಹ್ನ ಗಂಜಿ ಊಟ ಇರುತ್ತದೆ. ಕಚೇರಿಗೆ ಬರುವ ಪ್ರತೀಯೊಬ್ಬ ಸಾರ್ವಜನಿಕರು ಗಂಜಿ ಕೇಂದ್ರಕ್ಕೆ ಬಂದು ಗಂಜಿ ಊಟ ಮಾಡಬಹುದು. ಅಶೋಕ್ ರೈ ಶಾಸಕರು, ಪುತ್ತೂರು

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version