Published
2 weeks agoon
By
Akkare News
ಪುತ್ತೂರು: “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ” ಎಂಬ ಜನಜಾಗೃತಿ ಕಾರ್ಯಕ್ರಮ ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಬೋಳ್ವಾರ್ ನ ವಿದ್ಯಾರ್ಥಿಗಳ ಜೊತೆಯಲ್ಲಿ ಜಾಥಾದೊಂದಿಗೆ ದರ್ಬೆ ಸರ್ಕಲ್ ಬಳಿಯಿಂದ ಬೊಳ್ವಾರ್ ವರೆಗೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಎ.6ರಂದು ನಡೆಯಿತು.
ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಮತ್ತು ಪ್ರಗತಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರೀತಾ ಹೆಗ್ಡೆ ಅವರು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು.ಸಮಾರೋಪ ದಲ್ಲಿ ಪ್ರಗತಿ ಆಸ್ಪತ್ರೆಯ ಡಾ. ಶ್ರೀಪತಿ ರಾವ್ರವರು ಮಾತನಾಡಿ, ಅಶೋಕ್ ಕುಮಾರ್ ರೈ ಯವರ ಸಾಮಾಜಿಕ ಕಾಳಜಿ, ಇದು ದೇವರು ಮೆಚ್ಚುವಂತಹ ಕಾರ್ಯಕ್ರಮ ಎಂದರು.ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಇದು ಆರಂಭ ಮುಂದೆ ಆರು ತಿಂಗಳಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.ಈ. ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಜಯಪ್ರಕಾಶ್ ಬದಿನಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪ್ರಶಸ್ತಿ ವಿಜೇತ ಬಾಲಕೃಷ್ಣ ಪೋರ್ದಲ್ ಕಾರ್ಯಕ್ರಮ ನಿರ್ವಹಿಸಿದರು.