Connect with us

ಇಂದಿನ ಕಾರ್ಯಕ್ರಮ

*ಕಾಂಗ್ರೆಸ್‌ ಶಕ್ತಿ.. ಇದು ದೇಶದ ಶಕ್ತಿ ಡಿ.ಕೆ.ಶಿವಕುಮಾರ್

Published

on

ಪುತ್ತೂರು: 06.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೂತನವಾಗಿ ನಿರ್ಮಿಸಲು ಯೋಜಿಸಿರುವ ಕಾಂಗ್ರೆಸ್ ಭವನಕ್ಕೆ ಶಾಸಕರಾದ ಅಶೋಕ್‌ ಕುಮಾರ್‌ ರೈ, ಕಾಂಗ್ರೆಸ್‌ ಹಿರಿಯ ಮುಖಂಡರಾದ ರಮಾನಾಥ್‌ ರೈ, ವಿನಯ್‌ ಕುಮಾರ್‌ ಸೊರಕೆ, ಇನಾಯತ್ ಅಲಿ, ಪದ್ಮರಾಜ್ ಸೇರಿದಂತೆ ಹಲವು ಮುಖಂಡರೊಂದಿಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ನೆರವೇರಿಸಿ ಮಾತನಾಡಿದರು.

ನೂತನ ಕಾಂಗ್ರೆಸ್ ಭವನವು ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಲಿದೆ. ಜೊತೆಗೆ ಕಾರ್ಯಕರ್ತರಿಗೆ ಸಭೆ, ಚರ್ಚೆ ಹಾಗೂ ಸಂಘಟನೆಗಾಗಿ ಸೂಕ್ತ ವೇದಿಕೆಯಾಗಲಿದೆ.

ರಾಜ್ಯದಲ್ಲಿ 100 ಕಾಂಗ್ರೆಸ್‌ ಭವನಗಳನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿದ್ದು, ಆ ನಿಟ್ಟಿನಲ್ಲಿಂದು ಪುತ್ತೂರು ಕಾಂಗ್ರೆಸ್‌ ಭವನಕ್ಕೆ ಅಡಿಗಲ್ಲು ಹಾಕಲಾಗಿದೆ. ಆದಷ್ಟು ಬೇಗ ಕಾಂಗ್ರೆಸ್ ಭವನ ಪಕ್ಷದ ಕೆಲಸಕ್ಕೆ ದೊರೆಯಲಿ ಎಂದು ಶುಭಕೋರಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version