Connect with us

ಇಂದಿನ ಕಾರ್ಯಕ್ರಮ

ಗಾಂಧೀಕಟ್ಟೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸುವ ದಿನವಾಗಬೇಕು-ಅಶೋಕ್‌ ರೈ

Published

on

ಪುತ್ತೂರು: ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ನಾವು ಐದು ನಿಮಿಷದಲ್ಲಿ ಸಂತೋಷ ಪಟ್ಟು ಸಿಹಿಹಂಚಿ ಹಿಂತಿರುತ್ತೇವೆ. ಇದರ ಜೊತೆಗೆ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವವನ್ನು ಅವಶ್ಯಕತೆಯಿದೆ. ಮಕ್ಕಳ ಜೀವನ ಮಟ್ಟ ಸುಧಾರಣೆಯಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿರುವ ಹೋರಾಟ, ಲಕ್ಷಾಂತರ ಮಂದಿ ತ್ಯಾಗ, ಬಲಿದಾನ ಮಾಡಿರುವ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ ದಿನವಾಗಬೇಕಿದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಹೇಳಿದರು. ಬಸ್‌ ನಿಲ್ದಾಣದ ಬಳಿಯಿರುವ ಗಾಂಧೀಕಟ್ಟೆಯಲ್ಲಿ ನಡೆದ ದೇಶದ 80ನೇ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ರಾಜಕೀಯ ವ್ಯಕ್ತಿಗಳ ಭಾಷಣದಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶ ಉನ್ನತ ಸ್ಥಾನಕ್ಕೆ ಏರಲೂ ಸಾಧ್ಯವಿಲ್ಲ. ಮಕ್ಕಳು ಉತ್ತಮ ವಿದ್ಯಾವಂತರಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಿದ್ದು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಬೇಕು ಎಂದು ಹೇಳಿದರು. ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗಿಸ್, ತಹಶೀಲ್ದಾರ್ ಎಸ್‌.ಬಿ ಕೂಡಲಗಿ, ನಗರ ಯೋಜನಾ ಪ್ರಾಧೀಕಾರದ ಸದಸ್ಯ ನಿಹಾಲ್‌ ಶೆಟ್ಟಿ, ಗಾಂಧೀಕಟ್ಟೆ ಸಮಿತಿಯ ಸಯ್ಯದ್ ಕಮಲ್, ದಾಮೋದರ ಭಂಡಾರ್‌ಕ‌ರ್, ಸಾಹಿರಾ ಬಾನು ಮೊದಲಾದವರು ಉಪಸ್ಥಿತರಿದ್ದರು. ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್‌ ಆಳ್ವ ಸ್ವಾಗತಿಸಿ, ಜಗನ್ನಾಥ ರೈ ಸೂತ್ರಬೆಟ್ಟು ವಂದಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version