Connect with us

ಇತ್ತೀಚಿನ ಸುದ್ದಿಗಳು

ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ

Published

on

ಉಪ್ಪಿನಂಗಡಿ ವಿಭಾಗದ ಮೆಸ್ಕಾಂ ಪವರ್‌ಮೆನ್ ಶ್ರೀ ಸಾಬನ್ನ ಅವರು ನೆಕ್ಕಿಲಾಡಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವದಿಂದ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ, ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮದ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಹಗಲು-ರಾತ್ರಿ ಎನ್ನದೆ ಸಾರ್ವಜನಿಕರ ಅಗತ್ಯಗಳಿಗೆ ಸ್ಪಂದಿಸಿದ ಶ್ರೀ ಸಾಬನ್ನ ಅವರು ತಮ್ಮ ಸರಳತೆ, ಸೌಜನ್ಯ ಹಾಗೂ ಆತ್ಮೀಯ ನಡವಳಿಕೆಯಿಂದ ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಅವರ 11 ವರ್ಷಗಳ ಸೇವೆ ನೆಕ್ಕಿಲಾಡಿ ಗ್ರಾಮದ ಜನರ ಮನದಲ್ಲಿ ಸದಾ ಸ್ಮರಣೀಯವಾಗಿರಲಿದೆ. ಬಾಗಲಕೋಟೆಗೆ ವರ್ಗಾವಣೆಯಾಗುತ್ತಿರುವ ಶ್ರೀ ಸಾಬನ್ನ ಅವರಿಗೆ ಹೊಸ ಕರ್ತವ್ಯ ಸ್ಥಳದಲ್ಲಿಯೂ ಯಶಸ್ಸು, ಗೌರವ ಹಾಗೂ ಉತ್ತಮ ಭವಿಷ್ಯ ದೊರೆಯಲಿ ಎಂದು ಹಾರೈಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಯುನಿಕ್ ಹಾಗೂ ಸದಸ್ಯರಾದ ಕಲಂದರ್ ಶಾಫಿ ನೆಕ್ಕಿಲಾಡಿ, ಜಾನ್ ಕೆನೆಟ್, ಅಬ್ದುಲ್ ಖಾದರ್, ಅಕ್ಬರ್ ಹಾಗೂ ವಸಂತ ನಾಯ್ಕ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version