Connect with us

ಇತರ

ಶಾಸಕ ಅಶೋಕ್ ಕುಮಾರ್ ರೈಯವರ ಮಾನವೀಯತೆ ಕೂಡಲೇ ಸ್ಪಂದಿಸಿದ ಬಿಲ್ಲವ ಬ್ರಿಗೇಡ್ ಪುತ್ತೂರು

Published

on

ಪುತ್ತೂರು: ಬೆಳ್ತಂಗಡಿ ತಾಲೂಕಿನ ಕಕ್ಕೆಪದವು ನಿವಾಸಿ ಕುಂಜಿರ ಪೂಜಾರಿ ಎಂಬವರ ಸಂಕಷ್ಟಕ್ಕೆ ಸ್ಪಂದಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮಾನವೀಯತೆಗೆ ಪುತ್ತೂರು ಬಿಲ್ಲವ ಬ್ರಿಗೇಡ್ ಕೈ ಜೋಡಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕುಂಜಿರ ಪೂಜಾರಿ ಅವರು ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪತ್ನಿ ಮೀನಾಕ್ಷಿ, ಹತ್ತನೇ ತರಗತಿ ಆಕಾಶ್ ಮತ್ತು ಆರನೇ ತರಗತಿಯಲ್ಲಿ ಓದುತ್ತಿರುವ ಅಜಿತ್ ಳೊಂದಿಗೆ ಕುಂಜಿರ ಪೂಜಾರಿ ಕಷ್ಟದ ಜೀವನ ನಡೆಸುತ್ತಿದ್ದಾರೆ. ತಮ್ಮ ಕಷ್ಟದ ಕುರಿತು ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ತಿಳಿಸಲು ಪ್ರಯತ್ನಿಸಿದ ಕುಂಜಿರ ಪೂಜಾರಿ ಅವರ ಪುತ್ರ ಆಕಾಶ್ ಗೂಗಲ್ ನಲ್ಲಿ ಅಶೋಕ್ ರೈ ಅವರ ಮೊಬೈಲ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ನಮಗೆ ಬಹಳ ಕಷ್ಟ ಇದೆ. ಊಟಕ್ಕೆ ಕೂಡ ಕಷ್ಟವಾಗಿದೆ ಸರ್ ಕೂಡಲೇ ನಮಗೆ ಏನಾದರೂ ಸಹಾಯ ಮಾಡಬಹುದಾ ಎಂದು ಬಾಲಕ ವಿಚಾರಿಸಿದ್ದಾನೆ. ತಕ್ಷಣ ಶಾಸಕರು ತನ್ನ ಕಚೇರಿಯ ಆರೋಗ್ಯ ಘಟಕವನ್ನು ನೋಡಿಕೊಳ್ಳುತ್ತಿರುವ ವಿನೋದ್ ರೈ ಅವರಿಗೆ ಫೋನ್ ಮಾಡಿ ಕೂಡಲೇ ಈ ವಿಚಾರ ಬಿಲ್ಲವ ಬ್ರಿಗೇಡ್ ನವರಿಗೆ ತಿಳಿಸಿ. ಇದರ ಬಗ್ಗೆ ಕೂಲಂಕುಶವಾಗಿ ತಿಳಿದುಕೊಳ್ಳಲಿ ಎಂದರು. ಬಳಿಕ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಕುಂಜಿರ ಪೂಜಾರಿಯವರಿಗೆ ತುರ್ತು ಸಹಕಾರ ನೀಡಿದರು. ಮತ್ತು ಇಬ್ಬರು ಮಕ್ಕಳನ್ನು ತಕ್ಷಣ ಶಾಲೆಗೆ ಸೇರಿಸುವಂತೆ ವ್ಯವಸ್ಥೆಗಳನ್ನು ಮಾಡಿದ್ದಾರೆ. ಅಶೋಕ್ ರೈ ಮತ್ತು ಬಿಲ್ಲವ ಬ್ರಿಗೇಡ್ ನವರ ಈ ಸಹಾಯಕ್ಕೆ ಅಶಕ್ತರು ಕೃತಜ್ಞತೆ ಸಲ್ಲಿಸಿದರು. ಬಿಲ್ಲವ ಬ್ರಿಗೇಡ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಉದ್ಯoಗಳ, ಕೋಶಾಧಿಕಾರಿ ಚಂದ್ರ ಶೇಖರ್ ಕಲ್ಲಗುಡ್ಡೆ ಮತ್ತು ಸಾಮಾಜಿಕ ಜಾಲತಾಣ ಪ್ರಮುಖ್ ಪೃಥ್ವಿರಾಜ್ ನಿಯೋಗದಲ್ಲಿದ್ದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version