Published
8 hours agoon
By
Akkare News
ಸಂಜೆ ಸುಮಾರು 4 ಗಂಟೆಗೆ ನನ್ನ ಮಗ ಮತ್ತು ದಾಸೋಹದ ಸೇವೆಯಲ್ಲಿ ತೊಡಗಿದ್ದ ಸ್ವಯಂಸೇವಕರು ತಾಯಿಯ ದರ್ಶನಕ್ಕೆ ಹೋಗುವಾಗ ಅಲ್ಲಿದ್ದ ಪ್ರಾಧಿಕಾರದ ಒಬ್ಬ ಸಿಬ್ಬಂದಿ ತಡೆದು ನಿಲ್ಲಿಸಿ ‘ಯಾವುದೇ ಕಾರಣಕ್ಕೂ ದಾಸೋಹದವರನ್ನು ಒಳಗೆ ಬಿಡಬೇಡಿ, ಆವರು 2000 ರುಪಾಯಿಯ ಟಿಕೆಟ್ ತೆಗದು ಹೋಗಲಿ, ನಮಗೆ ರೂಪ ಮೇಡಮ್ ಖಡಕ್ ಸೂಚನೆ ನೀಡಿದ್ದಾರೆ’ ಎಂದು ಹೇಳಿರುತ್ತಾರೆ. ಆ ಸಮಯದಲ್ಲಿ ಪ್ರಾಧಿಕಾರದ ಉಳಿದ ಸಿಬ್ಬಂದಿಗಳು ಅವರಲ್ಲಿ ‘ಹೋಗ್ಲಿ ಬಿಡಿ ಅವರು ದಾಸೋಹದವರು’ ಎಂದು ಹೇಳಿದಾಗಲೂ ಅವರ ಮಾತನ್ನು ಕೇಳದೆ ಒಳಗೆ ಬಿಡಲಿಲ್ಲ. ನಂತರ ಅವರು 2,000 ರೂ ಕೊಟ್ಟು ಟಿಕೆಟ್ ಪಡೆದು ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಗರ್ಭಗುಡಿಯತ್ತ ಹೋಗುವ ಸಮಯದಲ್ಲಿ ಅದೇ ಪ್ರಾಧಿಕಾರದ ಅದೇ ಸಿಬ್ಬಂದಿ ಅಲ್ಲಿಗೂ ಬಂದು ‘ಒಳಗಡೆ ನೀವು ಹೇಗೆ ದರ್ಶನ ಮಾಡ್ತೀರಾ ನಾನು ನೋಡ್ತೀನಿ ‘ ಎಂದು ಹೇಳಿ ಬೆಳಿಗ್ಗೆ ಪಾಕಶಾಲೆಗೆ ಬಂದು ಗಲಾಟೆ ಎಬ್ಬಿಸಿದ್ದ ರಘು ಎಂಬ ಪೊಲೀಸ್ ಪೇದೆಯನ್ನು ಕರೆದು ನಮ್ಮವರನ್ನು ಹಿಂಬಾಲಿಸಿಕೊಂಡು ಬಂದು ಅಲ್ಲಿದ್ದ ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿ ಅವರಲ್ಲಿ ಅವರನ್ನು ಗುರುತು ಮಾಡಿ ತೋರಿಸುತ್ತಾರೆ. ದರ್ಶನ ಮಾಡುವ ಸಂದರ್ಭದಲ್ಲಿ ಆ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಮೇಲೆ ಕೈ ಮಾಡಿ ದೂಡಿರುತ್ತಾರೆ. ಆಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಮತ್ತು ಭಕ್ತಾಧಿಗಳು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪೊಲೀಸರನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ. ನಂತರ ಅದೇ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಬಳಿ ಬಂದು ಸಮಾಧಾನದಿಂದ ‘ಬನ್ನಿ ನಾನು ದರ್ಶನ ಮಾಡಿಸುತ್ತೇನೆ ಎಂದು ಹೇಳಿದಾಗ ಮನನೊಂದ ನನ್ನ ಮಗ ನನಗೆ ದರ್ಶನ ಬೇಡ. ನಾನು ಇಲ್ಲಿಂದಲೇ ತಾಯಿಗೆ ಕೈ ಮುಗಿಯುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಹೊರ ಬರುತ್ತಾನೆ.