Connect with us

ಇತರ

ಮೈಸೂರು ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಅವ್ಯವಸ್ಥೆಯ ಬಗ್ಗೆ ಧ್ವನಿಯೆತ್ತಿದ ಭಕ್ತ ಸಮೂಹ ಪ್ರಾಧಿಕಾರದ ಅಧಿಕಾರಿಗಳಿಂದ ಸರ್ವಾಧಿಕಾರಿ ಧೋರಣೆ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ಮತ್ತು ಅನ್ನದಾಸೋಹ ನಡೆಸಿದ ಭಕ್ತರಿಂದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ !!

Published

on

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಕಳೆದ ಐದು ವರ್ಷಗಳಿಂದ ಅನ್ನ ದಾಸೋಹ ಮಾಡುತ್ತಿರುವ ತನಗೆ ನೋವು ಉಂಟು ಮಾಡಿದೆ ಎಂದು ಬೆಂಗಳೂರಿನ ಜಿ. ಕೆ. ಫೌಂಡೇಷನ್ ಮುಖ್ಯಸ್ಥರಾದ ಉದ್ಯಮಿ ಮಹೇಶ್ .ಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದ ನಾಲ್ಕನೇ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಅನ್ನದಾನ ಮಾಡುತ್ತಿದ್ದೇನೆ. ಇದಕ್ಕಾಗಿ ವಾರ್ಷಿಕವಾಗಿ ಸುಮಾರು 30 ಲಕ್ಷ ರೂ. ವೆಚ್ಚ ಮಾಡುತ್ತಿದ್ದೇನೆ. ಆದರೆ ಈ ಬಾರಿ ಅನ್ನದಾನಕ್ಕಾಗಿ ಆಗಮಿಸಿದ್ದ ತಮ್ಮ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಈ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರ ವಿರುದ್ಧ ಮಹೇಶ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ವ್ಯವಸ್ಥೆ ಸರಿಯಿಲ್ಲ ಎಂಬ ಕಾರಣಕ್ಕೆ ನೋವಾಗಿದೆ. ಕಳೆದ ಐದು ವರ್ಷಗಳಿಂದ ಸಾವಿರಾರು ಭಕ್ತರಿಗೆ ಅನ್ನದಾನ ಮತ್ತು ಸುಮಾರು ನಾಲ್ಕು ವರ್ಷಗಳ ಕಾಲ ಹೂವಿನ ಅಲಂಕಾರ ಸೇವೆಯನ್ನು ಮಾಡುತ್ತಾ ಬಂದಿರುವ ನನಗೆ ತಾಯಿಯ ಭಕ್ತರ ಸೇವೆಯ ಉದ್ದೇಶದಿಂದ ಈ ಕಾರ್ಯವನ್ನು ನಡೆಸಿಕೊಂಡು ಬಂದಿದ್ದೇನೆ. ಆದರೆ ಈ ಬಾರಿ ಎದುರಾದ ಪರಿಸ್ಥಿತಿ ನೋವು ತಂದಿದೆ ಎಂದು ತಿಳಿಸಿದ ಅವರು ಮೈಸೂರು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಹಾಗೂ ಪೊಲೀಸ್ ಇಲಾಖೆಯ ಆಡಳಿತದ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾಸೋಹದ ಹಿಂದಿನ ದಿನ ಪ್ರಾಧಿಕಾರದವರು ‘ನಾಳೆ ಬೆಳಗ್ಗೆ ನೀವು 5 ಗಂಟೆಗೆ ಬನ್ನಿ ನಿಮಗೆ ವಾಹನ ಅನುಮತಿ ಮತ್ತು ದರ್ಶನದ ವ್ಯವಸ್ಥೆಯನ್ನು ನಾವು ಮಾಡಿಕೊಡುತ್ತೇವೆ’ ಎಂದು ಹೇಳಿದ್ದರು. ಆ ಪ್ರಕಾರವಾಗಿ ನಾವು ದಿನಾಂಕ 07-08-2026 ರಂದು ಬೆಳಗ್ಗೆ ಐದು ಗಂಟೆಗೆ ಬೆಟ್ಟದ ಕೆಳಗಡೆ ಇರುವ ತಾವರೆಕಟ್ಟೆ ಎಂಬಲ್ಲಿಗೆ ಬಂದಾಗ ಪೊಲೀಸರು ನಾಕಾಬಂಧಿ ಹಾಕಿದ್ದು ನಮ್ಮ ಗಾಡಿಯನ್ನು ತಡೆದು ನಿಲ್ಲಿಸುತ್ತಾರೆ. ಆಗ ನಾವು ಪೊಲೀಸರಿಗೆ ‘ನಾವು ಇಂದು ದಾಸೋಹ ಸೇವೆ ನಡೆಸುವವರು ಪ್ರಾಧಿಕಾರದವರು ಈ ಸಮಯದಲ್ಲಿ ಬರಲು ಹೇಳಿದ್ದರು’ ಎಂದು ಎಷ್ಟೇ ಮನವರಿಕೆ ಮಾಡಿದರು ಕೇಳದೆ ಪೊಲೀಸರು ನಮ್ಮನ್ನು ಸುಮಾರು 30 ನಿಮಿಷ ತಡೆದು ನಿಲ್ಲಿಸಿದರು. ನಂತರ ಒಬ್ಬ ಪೊಲೀಸ್ ಬಂದು ನಿಮ್ಮ ಗಾಡಿಯ ಅನುಮತಿ ಇದೆ ಎಂದು ಹೇಳಿ ಒಳಗಡೆ ಬಿಟ್ಟಿರುತ್ತಾರೆ. ಪ್ರಾಧಿಕಾರದವರು ಹೇಳಿದಂತೆ ನಾವು ನಮ್ಮ ಕುಟುಂಬದ ಜೊತೆ ತಾಯಿಯ ದರ್ಶನ ಮಾಡಲು ಮಹಿಷಾಸುರ ಮೂರ್ತಿ ಇರುವ ಜಾಗಕ್ಕೆ ಬಂದಾಗ ಅಲ್ಲಿ ಪೊಲೀಸರು ನಮ್ಮನ್ನು ತಡೆದು ನಿಲ್ಲಿಸುತ್ತಾರೆ. ಆಗ ಆ ಸ್ಥಳಕ್ಕೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪ ರವರು ಬಂದು ‘ಯಾರ್ರೀ ನಿಮ್ಮನ್ನು ಬರೋಕೆ ಹೇಳಿದ್ದು? ಇವಾಗ ದರ್ಶನ ಆಗಲ್ಲ’ ಎಂದು ಏರು ಧ್ವನಿಯಲ್ಲಿ ಮಾತನಾಡುತ್ತಾರೆ. ಆಗ ನಾವು ವಿನಯದಿಂದ ‘ಏನ್ ಮೇಡಂ ನಾವು ದಾಸೋಹದವರು, ನಿಮ್ಮ ಪ್ರಾಧಿಕಾರದವರೇ ನಮ್ಮನ್ನು ಈ ಸಮಯಕ್ಕೆ ಬರಲು ಹೇಳಿದರು’ ಎಂದು ನಾವು ಹೇಳಿದಾಗ ಹಾಗಾದರೆ ನೀವು ಒಬ್ಬರೇ ಬನ್ನಿ ಎಂದು ಹೇಳಿ ನಮ್ಮ ಕುಟುಂಬದ ಸದಸ್ಯರ ಎದುರಿಗೆ ನನಗೆ ಅವಮಾನ ಮಾಡಿದರು. ನಂತರ ನಮ್ಮ ಜೊತೆ ಬಂದವರೆಲ್ಲ 2000 ರೂ ಟಿಕೇಟ್ ತೆಗೆದು ತಾಯಿಯ ದರ್ಶನ ಮಾಡಿದರು. ಅನ್ನದಾಸೋಹ ನಡೆಯುವ ಸಂದರ್ಭದಲ್ಲಿ ಬೆಳೆಗೆ 7 ರಿಂದ 8 ಗಂಟೆಯ ಸುಮಾರಿಗೆ ಎರಡು ಜನ ನಮ್ಮ ಅನುಮತಿ ಇಲ್ಲದೆ ನಮ್ಮ ಪಾಕ ಶಾಲೆಗೆ ನುಗ್ಗಿ ನಾವು ತಯಾರಿಸಿದ ಉಪಹಾರವನ್ನು ದೊಡ್ಡ ಪಾತ್ರೆಗಳಲ್ಲಿ ತುಂಬಿಸುತಿದ್ದರು. ಆ ಸಂದರ್ಭದಲ್ಲಿ ಅಲ್ಲಿಯ ಮೇಲ್ವಿಚಾರಣೆ ನಡೆಸುತ್ತಿದ್ದ ನಮ್ಮ ತಂಡದ ಮುಕುಂದ ಎಂಬವರು ‘ಯಾರು ನೀವು? ಯಾಕೆ ಆಹಾರ ತುಂಬಿಸುತ್ತಿದ್ದೀರಿ? ಎಂದು ಅವರಲ್ಲಿ ಕೇಳಿದಾಗ ‘ನೀನ್ ಯಾವನೋ ಕೇಳೋದಕ್ಕೆ, ನಾವು ಪೊಲೀಸ್ ನವರು ನಮ್ಮನ್ನು ಕೇಳುತ್ತೀಯಾ? ಎಂದು ಮೇಲ್ವಿಚಾರಕನ ಮೇಲೆ ಕೈಮಾಡಲು ಪ್ರಯತ್ನಿಸಿದರು. ಆಗ ಅಲ್ಲಿಗೆ ಸಮವಸ್ತ್ರ ಧರಿಸಿದ್ದ ರಘು ಎಂಬ ಪೊಲೀಸ್ ಪೇದೆ ಬಂದು ನಮ್ಮ ಕಾರ್ಯಕರ್ತರ ಮೇಲೆ ದರ್ಪ ತೋರಿಸಿ ದಬ್ಬಾಳಿಕೆ ನಡೆಸಲು ಪ್ರಯತ್ನಿಸುತ್ತಾರೆ.

ಸಂಜೆ ಸುಮಾರು 4 ಗಂಟೆಗೆ ನನ್ನ ಮಗ ಮತ್ತು ದಾಸೋಹದ ಸೇವೆಯಲ್ಲಿ ತೊಡಗಿದ್ದ ಸ್ವಯಂಸೇವಕರು ತಾಯಿಯ ದರ್ಶನಕ್ಕೆ ಹೋಗುವಾಗ ಅಲ್ಲಿದ್ದ ಪ್ರಾಧಿಕಾರದ ಒಬ್ಬ ಸಿಬ್ಬಂದಿ ತಡೆದು ನಿಲ್ಲಿಸಿ ‘ಯಾವುದೇ ಕಾರಣಕ್ಕೂ ದಾಸೋಹದವರನ್ನು ಒಳಗೆ ಬಿಡಬೇಡಿ, ಆವರು 2000 ರುಪಾಯಿಯ ಟಿಕೆಟ್ ತೆಗದು ಹೋಗಲಿ, ನಮಗೆ ರೂಪ ಮೇಡಮ್ ಖಡಕ್ ಸೂಚನೆ ನೀಡಿದ್ದಾರೆ’ ಎಂದು ಹೇಳಿರುತ್ತಾರೆ. ಆ ಸಮಯದಲ್ಲಿ ಪ್ರಾಧಿಕಾರದ ಉಳಿದ ಸಿಬ್ಬಂದಿಗಳು ಅವರಲ್ಲಿ ‘ಹೋಗ್ಲಿ ಬಿಡಿ ಅವರು ದಾಸೋಹದವರು’ ಎಂದು ಹೇಳಿದಾಗಲೂ ಅವರ ಮಾತನ್ನು ಕೇಳದೆ ಒಳಗೆ ಬಿಡಲಿಲ್ಲ. ನಂತರ ಅವರು 2,000 ರೂ ಕೊಟ್ಟು ಟಿಕೆಟ್ ಪಡೆದು ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಗರ್ಭಗುಡಿಯತ್ತ ಹೋಗುವ ಸಮಯದಲ್ಲಿ ಅದೇ ಪ್ರಾಧಿಕಾರದ ಅದೇ ಸಿಬ್ಬಂದಿ ಅಲ್ಲಿಗೂ ಬಂದು ‘ಒಳಗಡೆ ನೀವು ಹೇಗೆ ದರ್ಶನ ಮಾಡ್ತೀರಾ ನಾನು ನೋಡ್ತೀನಿ ‘ ಎಂದು ಹೇಳಿ ಬೆಳಿಗ್ಗೆ ಪಾಕಶಾಲೆಗೆ ಬಂದು ಗಲಾಟೆ ಎಬ್ಬಿಸಿದ್ದ ರಘು ಎಂಬ ಪೊಲೀಸ್ ಪೇದೆಯನ್ನು ಕರೆದು ನಮ್ಮವರನ್ನು ಹಿಂಬಾಲಿಸಿಕೊಂಡು ಬಂದು ಅಲ್ಲಿದ್ದ ಪೊಲೀಸ್ ಹಿರಿಯ ಪೊಲೀಸ್ ಅಧಿಕಾರಿ ಅವರಲ್ಲಿ ಅವರನ್ನು ಗುರುತು ಮಾಡಿ ತೋರಿಸುತ್ತಾರೆ. ದರ್ಶನ ಮಾಡುವ ಸಂದರ್ಭದಲ್ಲಿ ಆ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಮೇಲೆ ಕೈ ಮಾಡಿ ದೂಡಿರುತ್ತಾರೆ. ಆಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಮತ್ತು ಭಕ್ತಾಧಿಗಳು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪೊಲೀಸರನ್ನು ತರಾಟೆಗೆ ತೆಗೆದು ಕೊಳ್ಳುತ್ತಾರೆ. ನಂತರ ಅದೇ ಹಿರಿಯ ಪೊಲೀಸ್ ಅಧಿಕಾರಿ ನನ್ನ ಮಗನ ಬಳಿ ಬಂದು ಸಮಾಧಾನದಿಂದ ‘ಬನ್ನಿ ನಾನು ದರ್ಶನ ಮಾಡಿಸುತ್ತೇನೆ ಎಂದು ಹೇಳಿದಾಗ ಮನನೊಂದ ನನ್ನ ಮಗ ನನಗೆ ದರ್ಶನ ಬೇಡ. ನಾನು ಇಲ್ಲಿಂದಲೇ ತಾಯಿಗೆ ಕೈ ಮುಗಿಯುತ್ತೇನೆ ಎಂದು ಹೇಳಿ ಕಣ್ಣೀರಿಟ್ಟು ಹೊರ ಬರುತ್ತಾನೆ. ‎

 
ನಾವು ಸತತ ಐದು ವರ್ಷಗಳಿಂದ ನಾವು ನಂಬಿರುವ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಸುಮಾರು 30 ಲಕ್ಷ ವೆಚ್ಚದಲ್ಲಿ ಆಷಾಡ ಮಾಸದ ಕೊನೆಯ ಶುಕ್ರವಾರದಂದು ಅನ್ನದಾನ ಸೇವೆಯನ್ನು ಮತ್ತು ಸುಮಾರು ನಾಲ್ಕು ವರ್ಷಗಳ ಕಾಲ ಹೂವಿನ ಅಲಂಕಾರ ಸೇವೆಯನ್ನು ಸ್ವಯಂ ಪ್ರೇರಿತನಾಗಿ ಮಾಡುತ್ತಾ ಬಂದಿರುತ್ತೇವೆ. ಈ ವರ್ಷ ನಮಗೆ ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪ ರವರು ಮತ್ತು ಸಿಬ್ಬಂದಿಗಳು ಈ ತರಹದ ಅವಮಾನ ಮತ್ತು ಪೊಲೀಸರು ನಮ್ಮ ಮೇಲೆ ತೋರಿದ ದರ್ಪ ದಬ್ಬಾಳಿಕೆಯನ್ನು ತಾಯಿ ಚಾಮುಂಡೇಶ್ವರಿಗೆ ನೋಡಿಕೊಳ್ಳಬೇಕು ಎಂದು ನಾನು ನನ್ನ ಕುಟುಂಬದ ಸದಸ್ಯರು, ನನ್ನ ಸ್ನೇಹಿತರು ಮತ್ತು ದಾಸೋಹ ಕಾರ್ಯದಲ್ಲಿ ನಮಗೆ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರ ಪರವಾಗಿ ಪ್ರಾರ್ಥಿಸುತ್ತೇನೆ. ‎ ‎ ‎ ಇಂತಿ ನಿಮ್ಮ ‎ಮಹೇಶ್ ಜಿ ‎ಜಿ.ಕೆ. ಫೌಂಡೇಶನ್ ಬೆಂಗಳೂರು.  
 

Continue Reading
Click to comment

Leave a Reply

Your email address will not be published. Required fields are marked *

Advertisement