Connect with us

ಇತರ

ಅಕ್ಟೋಬರ್ 1ರಿಂದ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್ ಹೊಸ ನಿಯಮಗಳು

Published

on

ಸೆಪ್ಟೆಂಬರ್ ಮುಗಿಯಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಅಕ್ಟೋಬರ್ 1ರಿಂದಲೇ ಎಲ್‌ಪಿಜಿ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಸೆಪ್ಟೆಂಬರ್ 2026ರಲ್ಲಿ ಕೇಂದ್ರ ತೈಲ ಸಚಿವಾಲಯ ಮತ್ತು ತೈಲ ಮಾರಾಟ ಕಂಪನಿಗಳು (ಇಂಡೇನ್, ಎಚ್‌ಪಿ ಗ್ಯಾಸ್ ಮತ್ತು ಭಾರತ್ ಗ್ಯಾಸ್) ಎಲ್‌ಪಿಜಿ ಗ್ರಾಹಕರಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿಯಮಗಳನ್ನು ಜಾರಿಗೆ ತಂದಿವೆ. ಈ ಬದಲಾವಣೆಗಳು ಸಿಲಿಂಡರ್ ಬುಕಿಂಗ್, ಸಬ್ಸಿಡಿ ಮತ್ತು ಇ-ಕೆವೈಸಿ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರಲಿವೆ. ಅಕ್ಟೋಬರ್ 1, 2026ರಿಂದ ಜಾರಿಗೆ ಬರುವಂತೆ ಎಲ್ಲಾ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸುವುದನ್ನು ಇಂಧನ ಸಚಿವಾಲಯ ಕಡ್ಡಾಯಗೊಳಿಸಿದೆ. ಅನರ್ಹ ಸಂಪರ್ಕಗಳನ್ನು ರದ್ದುಗೊಳಿಸುವುದು, ವಾಣಿಜ್ಯ ಬಳಕೆಗೆ ಗೃಹಬಳಕೆಯ ಸಿಲಿಂಡರ್‌ಗಳು ದುರುಪಯೋಗ ಆಗುವುದನ್ನು ತಡೆಯುವುದು ಮತ್ತು ನಿಜವಾದ ಫಲಾನುಭವಿಗಳಿಗೆ ಸಬ್ಸಿಡಿ ತಲುಪಿಸುವುದು ಇದರ ಉದ್ದೇಶವಾಗಿದೆ.
.
ದೃಢೀಕರಣ ಪೂರ್ಣಗೊಳಿಸುವ ವಿಧಾನಗಳು ದೃಢೀಕರಣಕ್ಕಿರುವ ಸುಲಭ ವಿಧಾನಗಳು ಅಕ್ಟೋಬರ್ 1ರ ಗಡುವಿನೊಳಗೆ ಗ್ರಾಹಕರು ಸುಲಭವಾಗಿ ದೃಢೀಕರಣ ಪೂರ್ಣಗೊಳಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಹಲವು ಆಯ್ಕೆಗಳನ್ನು ಒದಗಿಸಿವೆ. ಹಾಗಾದ್ರೆ ಅವುಗಳು ಯಾವುವು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. * ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿ ತೈಲ ಕಂಪನಿಗಳ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಬಹುದು.
* ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ಗ್ಯಾಸ್ ಏಜೆನ್ಸಿಗೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಪೂರೈಸಬಹುದು. * ಗ್ರಾಹಕರು ಮನೆಯಲ್ಲೇ ಕುಳಿತು ಕಂಪನಿಗಳ ಅಧಿಕೃತ ಆ್ಯಪ್‌ಗಳ ಮೂಲಕ ಸ್ವತಂತ್ರವಾಗಿ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡೇನ್ ಗ್ರಾಹಕರು ‘IndianOil ONE’, ಭಾರತ್ ಗ್ಯಾಸ್ ಗ್ರಾಹಕರು ‘HelloBPCL’ ಮತ್ತು ಎಚ್‌ಪಿ ಗ್ಯಾಸ್ ಗ್ರಾಹಕರು ‘HP PAY’ ಆ್ಯಪ್‌ಗಳನ್ನು ಬಳಸಬಹುದು. * ಗ್ರಾಹಕರಿಗೆ ಡಿಜಿಟಲ್ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ಪೋರ್ಟಲ್‌ನಲ್ಲಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಕೂಡ ಲಭ್ಯವಾಗಿಸಲಾಗಿದೆ.

ಎಲ್‌ಪಿಜಿ ಸಬ್ಸಿಡಿ ನಿಯಮಗಳು

ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸದ ಗ್ರಾಹಕರಿಗೆ ಸಬ್ಸಿಡಿ ಸಹಿತ ಸಿಲಿಂಡರ್ ಬುಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ದೃಢೀಕರಣ ಮುಗಿದ ನಂತರವೇ ಸಬ್ಸಿಡಿ ಸೌಲಭ್ಯ ಮರುಸ್ಥಾಪನೆ ಆಗಲಿದೆ. ಸೆಪ್ಟೆಂಬರ್ 19, 2026ರ ವೇಳೆಗೆ ದೇಶದ ಶೇಕಡ 89.9ರಷ್ಟು (27.43 ಕೋಟಿ) ಸಕ್ರಿಯ ಗ್ರಾಹಕರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇವರಿಗೆ ಸಬ್ಸಿಡಿಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ.

ಸಬ್ಸಿಡಿ ಬೇಡ ಅನ್ನುವವರು ಏನು ಮಾಡಬೇಕು?

ಬಯೋಮೆಟ್ರಿಕ್ ದೃಢೀಕರಣ ಮಾಡಿಸಲು ಇಷ್ಟವಿಲ್ಲದ ಅಥವಾ ಸಾಧ್ಯವಾಗದ ಗ್ರಾಹಕರು ತೈಲ ಕಂಪನಿಗಳ ಪೋರ್ಟಲ್, ಮೊಬೈಲ್ ಆಯಪ್, ವಾಟ್ಸಾಪ್ ಚಾಟ್‌ಬಾಟ್ ಅಥವಾ ಐವಿಆರ್‌ಎಸ್ ಮೂಲಕ ತಮ್ಮ ಆಯ್ಕೆಯನ್ನು ನೋಂದಾಯಿಸಿಕೊಳ್ಳಬಹುದು. ಆದರೆ ಅಂತಹ ಗ್ರಾಹಕರಿಗೆ ಯಾವುದೇ ಸಬ್ಸಿಡಿ ದೊರೆಯುವುದಿಲ್ಲ. ಅವರು ಮಾರುಕಟ್ಟೆ ದರದಲ್ಲಿ 5 ಕೆಜಿ ಅಥವಾ 10 ಕೆಜಿ ಸಿಲಿಂಡರ್‌ಗಳನ್ನು ಮಾತ್ರ ಖರೀದಿಸಲು ಅರ್ಹರಾಗಿರುತ್ತಾರೆ (ಲಭ್ಯತೆಗೆ ಅನುಗುಣವಾಗಿ). ಸಿಲಿಂಡರ್ ಬುಕಿಂಗ್ ಅಂತರ 25 ದಿನಗಳಿಗೆ ನಿಗದಿ ಈ ಹಿಂದೆ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಗ್ರಾಮೀಣ ಗ್ರಾಹಕರಿಗೆ 45 ದಿನಗಳು ಮತ್ತು ನಗರ ಪ್ರದೇಶದ ಗ್ರಾಹಕರಿಗೆ 25 ದಿನಗಳ ಬುಕಿಂಗ್ ಅಂತರ ನಿಗದಿಪಡಿಸಲಾಗಿತ್ತು. ಪ್ರಸ್ತುತ ಹೊಸ ನಿಯಮದ ಪ್ರಕಾರ, ಗ್ರಾಮೀಣ ಹಾಗೂ ನಗರ-ಎರಡೂ ಪ್ರದೇಶಗಳ ಗ್ರಾಹಕರಿಗೆ ಸಿಲಿಂಡರ್ ಮರು-ಬುಕಿಂಗ್ ಅಂತರವನ್ನು 25 ದಿನಗಳಿಗೆ ಏಕರೂಪವಾಗಿ ನಿಗದಿಪಡಿಸಲಾಗಿದೆ.

ಎಲ್‌ಪಿಜಿಯಿಂದ ಪಿಎನ್‌ಜಿಗೆ ಬದಲಾವಣೆ

ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಒದಗಿಸುವ ಪಿಎನ್‌ಜಿ (ಪಿಎನ್‌ಜಿ) ವಿಸ್ತರಣೆಗೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 1, 2026 ರಿಂದ ಹೊಸ ಪ್ರೋತ್ಸಾಹಕ ಯೋಜನೆಯನ್ನು ಆರಂಭಿಸಿದೆ. ಮಾರ್ಚ್ 2026ರಿಂದಲೇ ಎರಡು ಅಡುಗೆ ಅನಿಲ ಸಂಪರ್ಕಗಳನ್ನು ಸರ್ಕಾರ ನಿಷೇಧಿಸಿದೆ. ನಿಮ್ಮ ಬಡಾವಣೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಪಿಎನ್‌ಜಿ ಸೌಲಭ್ಯ ಲಭ್ಯ ಇದ್ದರೆ, ನೀವು ಎಲ್‌ಪಿಜಿ ಬಿಟ್ಟು ಪಿಎನ್‌ಜಿಗೆ ಬದಲಾಗುವುದು ಕಡ್ಡಾಯವಾಗಿದೆ. ಕಂಪನಿಗಳ ನೋಟಿಸ್ ನೀಡಿದ ಮೇಲೂ ಪಿಎನ್‌ಜಿಗೆ ಬದಲಾಗದ ಗ್ರಾಹಕರ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement