Published
4 hours agoon
By
Akkare News
ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್, ಹಾಲಿ ಸಿಎಂ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ 27 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದಿರುವ ಸುದ್ದಿ ಇತ್ತೀಚೆಗಷ್ಟೇ ಭಾರಿ ಸಂಚಲನ ಸೃಷ್ಟಿಸಿತ್ತು. ಆದರೆ, ಈಗ ಸಂಗೀತಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯ ಕೆಲವು ಆಘಾತಕಾರಿ ಅಂಶಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಅರ್ಜಿಯಲ್ಲಿರುವ ’11ನೇ ಪಾಯಿಂಟ್’ ಅನ್ನು ಮುಂದಿಟ್ಟುಕೊಂಡು ಡಿಎಂಕೆ ಪಕ್ಷವು ವಿಜಯ್ ವಿರುದ್ಧ ರಾಜಕೀಯ ದಾಳಿ ಆರಂಭಿಸಿದೆ.
ಅರ್ಜಿಯ ’11ನೇ ಪಾಯಿಂಟ್’ನಲ್ಲಿ ಏನಿದೆ?
ವರದಿಗಳ ಪ್ರಕಾರ, ಸಂಗೀತಾ ಅವರು ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿರುವ ವಿಚ್ಛೇದನ ಮತ್ತು ಜೀವನಾಂಶ ಕೋರಿಕೆಯ ಅರ್ಜಿಯಲ್ಲಿ ಪತಿ ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅರ್ಜಿಯ 11ನೇ ಕಾಲಂನಲ್ಲಿ, “ನನ್ನ ಪತಿ (ವಿಜಯ್) ಸಿನಿಮಾ ರಂಗದ ಪ್ರಮುಖ ನಟಿಯೊಬ್ಬರ ಜೊತೆ ವೈವಾಹಿಕ ಜೀವನ ಮೀರಿದ ಸಂಬಂಧ ಹೊಂದಿದ್ದಾರೆ. ಈ ವಿಷಯ ನನಗೆ 2021ರ ಏಪ್ರಿಲ್ ತಿಂಗಳಿನಲ್ಲಿ ಗೊತ್ತಾಯಿತು. ಆದಾಗ್ಯೂ ಅವರು ಆ ಸಂಬಂಧವನ್ನು ಮುಂದುವರಿಸಿದ್ದರಿಂದ ನಾನು ತೀವ್ರ ಮಾನಸಿಕ ಅಸ್ವಸ್ಥತೆ ಮತ್ತು ಕೌಟುಂಬಿಕ ಕಿರುಕುಳ ಅನುಭವಿಸುವಂತಾಯಿತು” ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಆ ನಟಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಕೆಲವು ಪೋಸ್ಟ್‌ಗಳು ನನ್ನ ಮತ್ತು ನನ್ನ ಮಕ್ಕಳ ನೆಮ್ಮದಿ ಕೆಡಿಸಿದವು. 2021ರಿಂದ ಪತಿ ನನ್ನನ್ನು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಕಡೆಗಣಿಸಿದ್ದಾರೆ. ಸದ್ಯ ನಾವು ಒಂದೇ ಮನೆಯಲ್ಲಿದ್ದರೂ ಅಪರಿಚಿತರಂತೆ ಪ್ರತ್ಯೇಕವಾಗಿಯೇ ಬದುಕುತ್ತಿದ್ದೇವೆ ” ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ ಎನ್ನಲಾಗಿದೆ. ‘ಆ ನಟಿ ಯಾರು?’ ಎಂದು ಕೆದಕಿದ ಡಿಎಂಕೆ ವಿಜಯ್ ಇತ್ತೀಚೆಗಷ್ಟೇ ಸಕ್ರಿಯ ರಾಜಕೀಯಕ್ಕೆ ಧುಮುಕಿ, ಡಿಎಂಕೆ ಸರ್ಕಾರದ ವಿರುದ್ಧ ತೊಡೆತಟ್ಟ ನಿಂತಿರುವುದರಿಂದ ಈ ಖಾಸಗಿ ವಿಷಯವನ್ನು ಡಿಎಂಕೆ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಡಿಎಂಕೆ ಪಕ್ಷದ ಅನಿವಾಸಿ ಭಾರತೀಯರ ವಿಭಾಗ (DMK NRI Wing) ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ನ್ಯಾಯಾಲಯದ ಪ್ರತಿಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದೆ.
ಕೊಲ್ಲೂರು ಭೇಟಿಯ ನಂತರ ಬದಲಾಯ್ತಾ ವಿಜಯ್ ಮನಸ್ಸು?
ಇತ್ತೀಚೆಗೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದ ನಂತರ ವಿಜಯ್ ಅವರು ತಮ್ಮ ವಿಚ್ಛೇದನದ ನಿರ್ಧಾರವನ್ನು ಮರುಪರಿಶೀಲಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. 27 ವರ್ಷಗಳ ದಾಂಪತ್ಯವನ್ನು ಮುರಿದುಕೊಳ್ಳುವ ಬದಲು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪತ್ನಿ ಸಂಗೀತಾ ಅವರ ಜೊತೆ ಮತ್ತೆ ಒಂದಾಗಲು ವಿಜಯ್ ಆಸಕ್ತಿ ತೋರಿದ್ದಾರೆ ಎಂದು ಆಪ್ತ ವಲಯದಲ್ಲಿ ವರದಿಯಾಗಿದೆ. ಆದರೆ, ಈ ಕೌಟುಂಬಿಕ ಕಲಹ ಮತ್ತು ಕೋರ್ಟ್ ಅರ್ಜಿ ಲೀಕ್ ಆಗಿರುವುದು ವಿಜಯ್ ಅವರ ರಾಜಕೀಯ ಜೀವನಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಾಜಕೀಯವಾಗಿ ವಿಜಯ್ ಅವರನ್ನು ಕಟ್ಟಿಹಾಕಲು ಕಾಯುತ್ತಿದ್ದ ವಿರೋಧ ಪಕ್ಷಗಳಿಗೆ ಈ ಡಿವೋರ್ಸ್ ವಿವಾದ ಅಸ್ತ್ರವಾಗುತ್ತಿದೆ.