Connect with us

ಇತರ

ಲಕ್ಷ್ಮಣ್‌ ಸವದಿಗೆ ಸಚಿವ ಸ್ಥಾನ; ಮಂಗಳೂರಲ್ಲಿ ಕಟೀಲು ದೇವಿಗೆ ಪೂಜೆ ಸಲ್ಲಿಸಿದ ಸವದಿ ಪುತ್ರ

Published

on

ಮಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಸಂಪುಟದಲ್ಲಿ ಲಕ್ಷ್ಮಣ್‌ ಸವದಿಗೆ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಸವದಿ ಪುತ್ರ ಟೆಂಪಲ್‌ ರನ್‌ ಮಾಡಿದ್ದಾರೆ.

ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸವದಿ ಪುತ್ರ ಶಶಿಕಾಂತ್‌ ಸವದಿ  ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ತಂದೆಗೆ ಸಚಿವ ಸ್ಥಾನ ಸಿಕ್ಕಿದ ಹಿನ್ನೆಲೆ ಕಟೀಲು ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಟೀಲು ತಾಯಿ ಆಶೀರ್ವಾದದಿಂದ ತಂದೆಗೆ ಸಚಿವ ಸ್ಥಾನ ಲಭಿಸಿದೆ. ನಿನ್ನೆ ರಾತ್ರಿಯೇ ವಿಷಯ ಗೊತ್ತಾಯಿತು. ಬುಸಿನೆಸ್ ಕಾರ್ಯ ನಿಮಿತ್ತ ಉಡುಪಿಯಲ್ಲಿದ್ದೆ. ಕಟೀಲು ದೇವಿಯನ್ನು ನಮ್ಮ ಕುಟುಂಬ ಶ್ರದ್ಧೆಯಿಂದ ಆರಾಧಿಸುತ್ತೇವೆ ಎಂದು ತಿಳಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version