Connect with us

ಇತರ

ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಕೊಡಿಪ್ಪಾಡಿ ಗ್ರಾಮ ಸಮಿತಿ ರಚನೆ

Published

on

ಪುತ್ತೂರು, ಜು. 3: ಸಮಾಜದ ಸಂಘಟನೆ, ಸೇವಾ ಮನೋಭಾವ ಹಾಗೂ ಗ್ರಾಮ ಮಟ್ಟದಲ್ಲಿ ಬಿಲ್ಲವ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ,ಕೊಡಿಪ್ಪಾಡಿ ಬಿಲ್ಲವ ಬ್ರಿಗೇಡ್ ಗ್ರಾಮ ಸಮಿತಿ ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ರಾಕೇಶ್ ಪೂಜಾರಿ (ಒಜಾಳ) ಹಾಗೂ ಕಾರ್ಯದರ್ಶಿಯಾಗಿ ಆನಂದ ಪೂಜಾರಿ (ಅರ್ಕ) ಅವರನ್ನು ಆಯ್ಕೆ ಮಾಡಲಾಗಿದೆ. ಸಮಿತಿಯ ಸದಸ್ಯರಾಗಿ ಶ್ರೀಧರ P (ಅರ್ಕ), ಕೇಶವ ಸುವರ್ಣ (ಪೆಲತ್ತಡಿ), ನವೀನ P (ಪೆಲತ್ತಡಿ), ಜಯ ಪೂಜಾರಿ (ಒಜಾಳ), ಪುನೀತ್ (ಬಾನೊಟ್ಟು) ಹಾಗೂ ಗುರುವಪ್ಪ ಪೂಜಾರಿ (ಭಟ್ರುಪಾಡಿ) ಅವರನ್ನು ನೇಮಕ ಮಾಡಲಾಗಿದೆ.

ಈ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಸಮಾಜದ ಸಂಘಟನೆಯನ್ನು ಬಲಪಡಿಸುವುದು, ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸುವುದು, ಯುವಕರನ್ನು ಸಂಘಟಿಸುವುದು ಹಾಗೂ ಸೇವಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಡೆಸುವ ನಿಟ್ಟಿನಲ್ಲಿ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ತಿಳಿಸಿದೆ.

ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸಮಾಜದ ಮುಖಂಡರು ಹಾಗೂ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಿ, ಯಶಸ್ವಿ ಕಾರ್ಯನಿರ್ವಹಣೆಗೆ ಶುಭ ಹಾರೈಸಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version