Connect with us

ಇತರ

ಬಡವರನ್ನು ನೀವು ಯಾಮಾರಿಸ್ತೀರಾ, ಮಗು ಸಾವಿಗೆ ಕೇವಲ 2 ಲಕ್ಷ ಅಂದರೆ ನಾನು ಒಪ್ಪಲ್ಲ ಎಂದ ಕರ್ನಾಟಕ ಹೈಕೋರ್ಟ್ ಜಡ್ಜ್‌..!

Published

on

​ಬೆಂಗಳೂರು: ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿದ ಮಗುವಿನ ಕುಟುಂಬಕ್ಕೆ ಕೇವಲ 2 ಲಕ್ಷ ನೀಡಬೇಕೆಂಬ ವಕೀಲ ವಾದಕ್ಕೆ ಕರ್ನಾಟಕ ಹೈಕೋರ್ಟ್ ಜಡ್ಜ್‌ ನಾಗಪ್ರಸನ್ನ ನಿರಾಕರಿಸಿ, ಬಡವರ ಜೀವ ಅಂದ್ರೆ ಅಷ್ಟೇನಾ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಡ್ಜ್‌ ಅವರ ಹೇಳಿಕೆಗೆ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬಡವರನ್ನು ನೀವು ಯಾಮಾರಿಸ್ತೀರಾ, ಮಗು ಸಾವಿಗೆ ಕೇವಲ 2 ಲಕ್ಷ ಅಂದರೆ ಏನು. ಏನಿದು ಪ್ರಕರಣ: ಕಾರ್ಮಿಕನೊಬ್ಬನ ಮಗು ಕೆಲಸ ಮಾಡುತ್ತಿದ್ದಾಗ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿತ್ತು. ಈ ಸಂಬಂಧ ಸೈಟ್ ಓನರ್, ಕಂಟ್ರಾಕ್ಟರ್‌ ಹಾಗೂ ಮೇಸ್ತ್ರಿ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣ ಕೊರ್ಟ್ ಮೆಟ್ಟಿಲೇರಿದ್ದು, ಮೃತ ಮಗುವಿನ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಲು ಮೂವರ ಪರ ವಾದ ಮಂಡಿಸಿದ ವಕೀಲನ ವಾದಕ್ಕೆ ಜಡ್ಜ್ ನಿರಾಕರಿಸಿದ್ದಾರೆ. ಬಡವರ ಜೀವ ಅಂದ್ರೆ ಅಷ್ಟೇನಾ. ಮೂವರು ಸೇರಿ ಬರೀ ₹2ಲಕ್ಷ ಅಂದ್ರೆ ಏನ್. ನಾನು ಇದಕ್ಕೆ ಯಾವುದೇ ಕಾರಣಕ್ಕೂ ಒಪ್ಪಲ್ಲ. ಅವರು ಬಡವರು, ₹2ಲಕ್ಷಕ್ಕೆ ಒಪ್ಪಿರಬಹುದು, ಆದರೆ ನಾನು ಇದಕ್ಕೆ ಒಪ್ಪಲ್ಲ ಎಂದ ಕರ್ನಾಟಕ ಹೈಕೋರ್ಟ್ ಜಡ್ಜ್‌ ನಾಗಪ್ರಸನ್ನ

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version