Published
2 hours agoon
By
Akkare News
ಬಿಲ್ಲವ ಸಮಾಜದ ಮಕ್ಕಳನ್ನು ವಿಶ್ವದಲ್ಲೇ ಗುರುತಿಸುವಂತಾಗಬೇಕು : ಚಿದಾನಂದ ಸುವರ್ಣ
ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬಿಲ್ಲವ ಮಹಿಳಾ ವೇದಿಕೆ ಇದರ ಕೋಡಿoಬಾಡಿ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ಜೂ. 27 ರಂದು ಹಿರಿಯ ಪ್ರಾಥಮಿಕ ಶಾಲೆ ಕೋಡಿoಬಾಡಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ, ಬಿಲ್ಲವ ಸಮಾಜದ ಮಕ್ಕಳು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿಶ್ವವೇ ಗುರುತಿಸುವಂತಾಗಬೇಕು ಎಂದರು . ಕೋಡಿoಬಾಡಿ ಗ್ರಾಮ ಸಮಿತಿ ಸಮಾಜದ ಅಭಿವೃದ್ಧಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು ಇನ್ನು ಮುಂದೆಯೂ ಈ ಗ್ರಾಮ ಸಮಿತಿಯಿಂದ ಉತ್ತಮ ಸೇವೆ ನಡೆಯಲಿ ಎಂದು ಶುಭ ಹಾರೈಸಿದರು.
ಹನ್ಸ್ಶಿಕ್. ಡಿ ಯವರ ಪ್ರಾರ್ಥನೆ ಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಉಗ್ಗಪ್ಪ ಪೂಜಾರಿ ಪರನೀರು,ಕುಮಾರನಾಥ್ ಪಲ್ಲತ್ತಾರು , ವಿಜಯ ಕುಮಾರ್ ಚೀಮುಳ್ಳು , ರಮೇಶ್ ಕಜೆ, ಶ್ರೀಧರ ಪೂಜಾರಿ ಕೆದಿಕಂಡೆ, ಉಮೇಶ್ ಡೆಕ್ಕಾಜೆ, ಯಮುನಾ ಡೆಕ್ಕಾಜೆ, ಪವಿತ್ರ ಕೈಪ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ವಿನುತಾ ಜಯಪ್ರಕಾಶ್ ಬದಿನಾರು ವಂದಿಸಿದರು ಭರತ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.