Connect with us

ಇತರ

ಕೋಡಿಂಬಾಡಿ ಬಿಲ್ಲವ ಸಂಘದ ವಾರ್ಷಿಕ ಮಹಾಸಭೆ: ಪ್ರತಿಭಾ ಪುರಸ್ಕಾರ, ಸಹಾಯಧನ ವಿತರಣೆ

Published

on

ಬಿಲ್ಲವ ಸಮಾಜದ ಮಕ್ಕಳನ್ನು ವಿಶ್ವದಲ್ಲೇ ಗುರುತಿಸುವಂತಾಗಬೇಕು : ಚಿದಾನಂದ ಸುವರ್ಣ

ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಹಾಗೂ ಬಿಲ್ಲವ ಮಹಿಳಾ ವೇದಿಕೆ  ಇದರ ಕೋಡಿoಬಾಡಿ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಹಾಯಧನ ವಿತರಣೆ ಕಾರ್ಯಕ್ರಮ ಜೂ. 27 ರಂದು ಹಿರಿಯ ಪ್ರಾಥಮಿಕ ಶಾಲೆ ಕೋಡಿoಬಾಡಿಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಚಿದಾನಂದ ಸುವರ್ಣ, ಬಿಲ್ಲವ ಸಮಾಜದ ಮಕ್ಕಳು ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿಶ್ವವೇ ಗುರುತಿಸುವಂತಾಗಬೇಕು ಎಂದರು . ಕೋಡಿoಬಾಡಿ ಗ್ರಾಮ ಸಮಿತಿ ಸಮಾಜದ ಅಭಿವೃದ್ಧಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು ಇನ್ನು ಮುಂದೆಯೂ ಈ ಗ್ರಾಮ ಸಮಿತಿಯಿಂದ ಉತ್ತಮ ಸೇವೆ ನಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಚೆಸ್ ಟೂರ್ನಮೆಂಟ್ನಲ್ಲಿ 6 ನೇ ಸ್ಥಾನ ಪಡೆದ ಪ್ರಾನ್ವಿ ಜೆ. ಬಿ, ಜಿಲ್ಲಾ ಮಟ್ಟದ ಥ್ರೋ ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ ಪವಿತ್ರ ಕೈಪ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 97 ಅಂಕ ಗಳಿಸಿದ ದಿಗಂತ್ ಡಿ ಪೂಜಾರಿ ಡೆಕ್ಕಾಜೆ, ಶೇಕಡಾ 92 ಅಂಕ ಗಳಿಸಿದ ದೃಣಿತಾ ಪಿ ಸನಿಲ್ ಹೆಗ್ಡೆಹಿತ್ತಿಲು ಹಾಗೂ ನಾಟಿ ವೈದ್ಯೆ ವಾರಿಜಾ ಕೃಷ್ಣಪ್ಪ ಪೂಜಾರಿ ಡೆಕ್ಕಾಜೆ ಯವರನ್ನು ಗುರುತಿಸಿ ಗೌರವಿಸಲಾಯಿತು.ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಯುವ ಉದ್ಯಮಿ ಅಜಿತ್ ಆರ್ ಪೂಜಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗ್ರಾಮ ಸಮಿತಿಯ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಬಿಲ್ಲವ ಸಂಘದ ಕಾರ್ಯದರ್ಶಿ ಬಿ ಟಿ ಮಹೇಶ್ಚಂದ್ರ ಸಾಲ್ಯಾನ್, ಉಪಾಧ್ಯಕ್ಷೆ ಪುಷ್ಪಾವತಿ ಕೇಕುಡೆ, ಕೋಶಾಧಿಕಾರಿ ಜನಾರ್ಧನ ಪೂಜಾರಿ ಪದಡ್ಕ, ಗ್ರಾಮ ಸಮಿತಿಯ ಗೌರವಾಧ್ಯಕ್ಷ ಜಯಾನಂದ. ಕೆ, ಕೋಡಿoಬಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ , ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮಲತಾ ಡೆಕ್ಕಾಜೆ  ಉಪಸ್ಥಿತರಿದ್ದರು.

ಹನ್ಸ್ಶಿಕ್. ಡಿ  ಯವರ ಪ್ರಾರ್ಥನೆ ಯೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮದಲ್ಲಿ ಉಗ್ಗಪ್ಪ ಪೂಜಾರಿ ಪರನೀರು,ಕುಮಾರನಾಥ್ ಪಲ್ಲತ್ತಾರು , ವಿಜಯ ಕುಮಾರ್ ಚೀಮುಳ್ಳು , ರಮೇಶ್ ಕಜೆ,  ಶ್ರೀಧರ ಪೂಜಾರಿ ಕೆದಿಕಂಡೆ, ಉಮೇಶ್ ಡೆಕ್ಕಾಜೆ, ಯಮುನಾ ಡೆಕ್ಕಾಜೆ, ಪವಿತ್ರ ಕೈಪ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಉಲ್ಲಾಸ್ ಕೋಟ್ಯಾನ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ವಿನುತಾ ಜಯಪ್ರಕಾಶ್ ಬದಿನಾರು ವಂದಿಸಿದರು ಭರತ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement