Connect with us

ಸ್ಥಳೀಯ

ನರಿಮೊಗರು: ಸಾಂದೀಪನಿ ವಿದ್ಯಾಸಂಸ್ಥೆಯ ಸ್ಕೌಟ್ಸ್, ಗೈಡ್ಸ್, ಕಬ್ ,ಬುಲ್ ಬುಲ್ ವಿದ್ಯಾರ್ಥಿಗಳಿಗೆ ಭತ್ತದ ನೇಜಿ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Published

on

ತರಗತಿ ಪಾಠದ ಹೊರತಾಗಿ ಗದ್ದೆಯತ್ತ ಪಯಣಿಸಿ ಭತ್ತ ಬೇಸಾಯದ ವಿಧಾನವನ್ನು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು (ರಿ) ನರಿಮೊಗರು,ಪುತ್ತೂರು ಇಲ್ಲಿನ ಸ್ಕೌಟ್ಸ್, ಗೈಡ್ಸ್, ಕಬ್,ಬುಲ್ ಬುಲ್ ವಿದ್ಯಾರ್ಥಿಗಳು ತಿಳಿದುಕೊಂಡರು. ಆದರೆ ಅಲ್ಲಿ ಶಿಕ್ಷಕರ ಬದಲು ಪರಿಶ್ರಮಿ ರೈತರು ವಿದ್ಯಾರ್ಥಿಗಳಿಗೆ ಕೃಷಿ ಪಾಠ ಹೇಳಿಕೊಟ್ಟರು. ನಮ್ಮ ನಡಿಗೆ ಪ್ರಕೃತಿಯ ಕಡೆಗೆ ಎಂಬ ಘೋಷದೊಂದಿಗೆ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಶ್ರೀಯುತ ಜಯರಾಮ ಪ್ರಭು ನರಿಮೊಗರು ಇವರ ಗದ್ದೆಯಲ್ಲಿ ಉಳುಮೆ ಹಾಗೂ ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಗದ್ದೆಯಲ್ಲಿ ಉಳುಮೆ ಮಾಡುವ ವಿಧಾನವನ್ನು ಸಂಸ್ಥೆಯ ಪೋಷಕರೂ, ಕೃಷಿಕರೂ ಆದ ಶ್ರೀಯುತ ಜಯರಾಮ ಪ್ರಭು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಮಗ್ರ ಕೃಷಿ ಪದ್ದತಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿಯನ್ನು ಗಳಿಸಿರುವ ವಿದ್ಯಾಸಂಸ್ಥೆಯ ಪೋಷಕರಾದ ಶ್ರೀಯುತ ನಾಗೇಶ್ ಇವರು ಭತ್ತದ ನಾಟಿ ಮಾಡುವ ವಿಧಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣ ಪ್ರಸಾದ್ ಕೆದಿಲಾಯ ಶಿಬರ ಭತ್ತ ಬೇಸಾಯದ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಮಳೆಯ ಸಿಂಚನದ ಜೊತೆ ವಿದ್ಯಾರ್ಥಿಗಳು ಸ್ವತಃ ತಾವೇ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಹೊಸ ಕೃಷಿ ಜ್ಞಾನವನ್ನು ಪಡೆದುಕೊಂಡರು. ಗದ್ದೆ ನೀರಿನಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಪೋಷಕರಾದ ಶ್ರೀಯುತ ಜಯರಾಮ ಪ್ರಭು ಮತ್ತು ಮನೆಯವರು ಎಲ್ಲರಿಗೂ ಸಿಹಿತಿಂಡಿ,ಲಘುಪಾನೀಯ ನೀಡಿದರು. ವಿದ್ಯಾರ್ಥಿಗಳು ಪ್ರಕೃತಿಯ ಜೊತೆ ಬೆರೆತು,ಕೃಷಿ ಪಾಠದೊಂದಿಗೆ ಜಿಟಿ ಜಿಟಿ ಮಳೆಯೊಡನೆ ಸಂಭ್ರಮದಿಂದ ಶಾಲೆಯತ್ತ ಹಿಂತಿರುಗಿದರು. ಈ ವಿನೂತನ ಕಾರ್ಯಕ್ರಮಕ್ಕೆ ಸಂಸ್ಥೆಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ, ಕಾರ್ಯದರ್ಶಿಗಳಾದ ಶ್ರೀಯುತ ಕೃಷ್ಣಪ್ರಸಾದ್ ಕೆದಿಲಾಯ , ಕೋಶಾಧಿಕಾರಿಗಳಾದ ಶ್ರೀಯುತ ಹರೀಶ್ ಪುತ್ತೂರಾಯ, ಮುಖ್ಯೋಪಾಧ್ಯಾಯರಾದ ಶ್ರೀಯುತ ಪ್ರಸನ್ನ.ಕೆ ಇವರು ಮಾರ್ಗದರ್ಶನ ಮಾಡಿದರು. ಸಂಸ್ಥೆಯ ಸ್ಕೌಟ್ಸ್ ಮಾಸ್ಟರ್ಸ್ ಗಳಾದ ಶ್ರೀ ಮುರಳಿಕೃಷ್ಣ.ಪಿ, ಶ್ರೀಮತಿ ವಿಜೇತಾ, ಗೈಡ್ ಕ್ಯಾಪ್ಟನ್ಸ್ ಶ್ರೀಮತಿ ಅಕ್ಷತಾ, ಶ್ರೀಮತಿ ಸ್ಮಿತಾ, ಪ್ಲಾಕ್ ಲೀಡರ್ಸಗಳಾದ ಶ್ರೀಮತಿ ಅನಿತಾ‌.ಕೆ, ಶ್ರೀಮತಿ ನಯನಾ, ಲೇಡಿ ಕಬ್ ಮಾಸ್ಟರ್ಸ್ ಗಳಾದ ಶ್ರೀಮತಿ ಭವಿತಾ.ಕೆ, ಶ್ರೀಮತಿ ನಯನಾ.ಕೆ , ಸಹ ಶಿಕ್ಷಕರಾದ ಶ್ರೀಮತಿ ಪ್ರಮೀಳಾ‌‌, ಶ್ರೀಮತಿ ಚೈತ್ರಶ್ರೀ, ಶ್ರೀಮತಿ ದೇವಕಿ,ಯೋಗ ಶಿಕ್ಷಕರಾದ ಶ್ರೀ ನವೀನ್ ಕುಮಾರ್,ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಯಚಂದ್ರ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕ ವೃಂದ,ಸಿಬ್ಬಂದಿ ವರ್ಗದವರು ಈ ವಿನೂತನ ಕಾರ್ಯಕ್ರಮಕ್ಕೆ ಸಹಕರಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version