Published
1 hour agoon
By
Akkare News
ಪುತ್ತೂರು: ಪ್ರಭು ಶ್ರೀರಾಮಚಂದ್ರನ ಕುರಿತು ಪ್ರೊ.ಭಗವಾನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಾಸಕ ಅಶೋಕ್ ಕುಮಾರ್ ರೈ ಅವರು “ಭಗವಾನ್ ಯಾವ ಧರ್ಮವನ್ನು ನಂಬುತ್ತಾರೆ ಎಂದು ನಮಗೆ ಗೊತ್ತಿಲ್ಲ. ಅವರು ಹಿಂದೂ ಧರ್ಮದ ಭಾವನೆಯನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ” ಎಂದು ಅವರು ಹೇಳಿದರು.
“ಇಂತಹವರ ವಿರುದ್ಧ ಕೂಡಲೇ ಕೇಸ್ ಹಾಕಿ ಬಂಧಿಸಬೇಕು. ಭಗವಾನ್ ಮೇಲೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಯಾವುದೇ ಹಿಂದೂ ಸಂಘಟನೆಯು ಗೃಹ ಸಚಿವರಿಗೆ, ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಮನವಿ ಮಾಡಿ ಎಂದು ನನ್ನಲ್ಲಿ ಹೇಳಿಲ್ಲ. ಆದರೂ ಅವರವರ ಧರ್ಮ ಅವರವರಿಗೆ ಮುಖ್ಯ, ಅದು ನಂಬಿಕೆ” ಎಂದು ಅಶೋಕ್ ರೈ ತಿಳಿಸಿದರು. ಈ ಬಗ್ಗೆ ಗೃಹ ಸಚಿವ ಹಾಗೂ ಮುಖ್ಯಮಂತ್ರಿಯವರಲ್ಲಿ ಮಾತನಾಡಿ ಭಗವಾನ್ ಮೇಲೆ ಸುಮೊಟೊ ಕೇಸ್ ದಾಖಲಿಸಲು ಒತ್ತಾಯಿಸುತ್ತೇನೆ” ಎಂದು ಅವರು ಆಗ್ರಹಿಸಿದರು.