Connect with us

ಸ್ಥಳೀಯ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ದೀಪಾವಳಿ ಆಚರಣೆ

Published

on

ಉಡುಪಿ/ಮಂಗಳೂರು: ಸಂಭ್ರಮದ ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಕರಾವಳಿಯಲ್ಲಿ ನ. 7ರಂದು ಹಬ್ಬ ಆರಂಭಗೊಳ್ಳಲಿದೆ.

ನ. 7ರ ಸಂಜೆ ನೀರು ತುಂಬುವುದು (ಗಂಗಾಪೂಜೆ- ಜಲಪೂರಣ), ನ. 8ರ ಬೆಳಗ್ಗಿನ ಜಾವ ಚಂದ್ರೋದಯದ ವೇಳೆ 5.27 ಗಂಟೆಗೆ ತೈಲಭ್ಯಂಗ (ಎಣ್ಣೆ ಸ್ನಾನ), ಸಂಜೆ/ರಾತ್ರಿ ಬಲೀಂದ್ರ ಪೂಜೆ, ಗೂಡುದೀಪ ಹಚ್ಚುವುದು (ಒಂದು ತಿಂಗಳು ನಡೆಯಲಿದೆ), ನ. 9ರ ಬೆಳಗ್ಗೆ ಗೋಪೂಜೆ, ನ. 8 ಅಥವಾ 9ರಂದು ಲಕ್ಷ್ಮೀ ಪೂಜೆ ನಡೆಯಲಿದೆ.ಮೂಲ್ಕಿ ಶಾಂಭವಿ ನದಿ ದಕ್ಷಿಣ ಭಾಗದಲ್ಲಿ ನ. 9ರ ಸಂಜೆ/ರಾತ್ರಿ ಬಲೀಂದ್ರ ಪೂಜೆ ಆಚರಣೆ ಇದೆ. ನ. 6ರಂದು ಧನ್ವಂತರಿ ಜಯಂತಿ – ಧನತ್ರಯೋದಶಿಯಾಗಿದೆ. ನ. 6ರಂದು ಸಂಜೆ ಶ್ರೀಕೃಷ್ಣಮಠ, ಅಷ್ಟಮಠ, ಕೆಲವು ಮನೆಗಳಲ್ಲಿ ಯಮದೀಪವನ್ನು (ಅಪಮೃತ್ಯು ನಿವಾರಣೆಗೆ ಕಬ್ಬಿಣದ ಉಪಕರಣದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪ ಇಡುವುದು) ಹಚ್ಚುವ ಸಂಪ್ರದಾಯವಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version