Connect with us

ಸ್ಥಳೀಯ

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬಿಗ್​​ ಶಾಕ್​​: ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಮಾಡಿದ್ರೆ ಕೇಸ್​​ ದಾಖಲಿಸಲು ಸರ್ಕಾರ ಚಿಂತನೆ

Published

on

ಬೆಂಗಳೂರು, ಅಕ್ಟೋಬರ್​​ 11: ಆರೋಗ್ಯ ಇಲಾಖೆ ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಬಿಗ್​​ ಶಾಕ್​​ ಕೊಡಲು ಮುಂದಾಗಿದ್ದು, ಡೆಡ್‌ಬಾಡಿ ಮೇಲೆ ಬಿಲ್ ವಸೂಲಿ ಸಂಬಂಧ ಹೊಸ ರೂಲ್ಸ್ಗೆ ಸಿದ್ಧತೆ ನಡೆಸಿದೆ. ಅದರನ್ವಯ ಬಿಲ್ ಕಟ್ಟಿದ್ರೆ ಮಾತ್ರ ಮೃತದೇಹ ನೀಡುತ್ತೇವೆ ಎಂಬ ಆಸ್ಪತ್ರೆಗಳ ಮೇಲೆ ಕೇಸ್​​ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರುಗಳು ಕೇಳಿಬುರುತ್ತಿರುವ ಹಿನ್ನಲೆ, ಹೊಸ ನಿಯಮಗಳ ಮೂಲಕ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲು ತಯಾರಿ ನಡೆದಿದೆ.ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ಸಂಚಾರ ಸಲಹೆ ಪ್ರಕಟಿಸಿದೆ.ಕೂಳೂರು ಫೆರಿ ರಸ್ತೆಯ ಕಾರ್‌ಸ್ಟ್ರೀಟ್, ಬಾಲಾಜಿ ಜಂಕ್ಷನ್, ನ್ಯೂ ಚಿತ್ರಾ ಜಂಕ್ಷನ್, ಅಳಕೆ ಬ್ರಿಡ್ಜ್

ಎಲ್ಲರ ಜೊತೆ ಚರ್ಚಿಸಿ ಹೊಸ ಕಾನೂನು’ ಈ ವಿಚಾರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್​​ ಪ್ರತಿಕ್ರಿಯಿಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಯಾರಾದ್ರೂ ಮೃತಪಟ್ಟರೆ ದುಡ್ಡು ಕಟ್ಟಿ ಮೃತದೇಹ ಪಡೆಯಬೇಕು. ದುಡ್ಡು ಇಲ್ಲ ಎಂದು ಪರದಾಡುವ ಕುಟುಂಬಕ್ಕಿದು ಆರ್ಥಿಕ ಹೊರೆಯಾಗಲಿದೆ. ದುಡ್ಡಿಗಾಗಿ ಮೃತದೇಹ ಇಟ್ಟಕೊಂಡು ಸತಾಯಿಸುವ ಕೆಲಸ ಆಗಬಾರದು. ಈ ಬಗ್ಗೆ 2007-18 ಎರಡೂ ಸಲ ಕಾನೂನು ಬಂದಿದ್ರು ಸಮರ್ಪಕ ಅನುಷ್ಠಾನವಾಗಿಲ್ಲ. ಆದರೆ ನಾನು ಇದನ್ನ ಶೇ.100ರಷ್ಟು ಅನುಷ್ಠಾನ ಮಾಡುತ್ತೇನೆ. 2018ರಲ್ಲಿ ಶ್ಯೂರಿಟಿ ಪಡೆದು ಬಾಡಿ ನೀಡುವ ಕಾನೂನು ಮಾಡಲಾಗಿತ್ತು. ಆಸ್ಪತ್ರೆಗಳ ಬಿಲ್ ನೀಡಿಲ್ಲ ಅಂದರೆ ಕೇಸ್ ಹಾಕಬಹುದು ಅಂತಲೂ ಇತ್ತು. ಹೀಗಾಗಿ ಕೇಸ್ ಯಾಕೆ ಅಂತ ಸಾಲ ಮಾಡಿ ಜನರು ದುಡ್ಡು ಕಟ್ಟುತ್ತಿದ್ದಾರೆ. ಹೀಗಾಗಿ ಈ ಕಾನೂನಿನ ಬದಲಾವಣೆ ಮಾಡಬೇಕಿದೆ. ಆಸ್ಪತ್ರೆಯ ಸಂಘಗಳು ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡಿ ಹೊಸ ಕಾನೂನು ರೂಪಿಸಲು ಯೋಚನೆ ಮಾಡುತ್ತಿದ್ದೇನೆ ಎಂದವರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಈ ಹೊಸ ಚಿಂತನೆಯಿಂದ ನಮಗೆ ಸಮಸ್ಯೆಯಾಗುತ್ತೆ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷೆ ಡಾ.ಶೋಭಾ ಪ್ರಕಾಶ್ ತಿಳಿಸಿದ್ದಾರೆ. ICUನಲ್ಲಿ ಚಿಕಿತ್ಸೆ, ಮೆಡಿಸಿನ್ ನೀಡುರುತ್ತೇವೆ. ಈಗ ಮೃತಪಟ್ಟ ಮೇಲೆ ಬಿಲ್ ಇಲ್ಲದೆ ಮೃತದೇಹ ನೀಡಿ ಅಂದ್ರೆ ಕಷ್ಟ. ಸಚಿವರ ನಿರ್ಧಾರ ಸರಿ ಇದೆ, ಆದ್ರೆ ಇದಕ್ಕೆ ಪರ್ಯಾಯ ಕ್ರಮವಹಿಸಬೇಕು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳ ಜೊತೆ ಚರ್ಚೆ ಮಾಡಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version