Connect with us

ಸ್ಥಳೀಯ

ಉದ್ಯಮಿ ಪರಿವಾರ ಸೊಸೈಟಿನ ಅಧ್ಯಕ್ಷ ಸಂತೋಷ್ ಕುಮಾರ್ ನಿಧನ

Published

on

ಪುತ್ತೂರು: ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ,ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ,ಪರಿವಾರ ಬಂಟರ ಸಂಘ ಮಂಗಳೂರು ಇದರ ನಿಖಟಪೂರ್ವ ಅಧ್ಯಕ್ಷ ನೆಹರೂನಗರ ಕಾಯರ್ ಮಜಲು ನಿವಾಸಿ ಸಂತೋಷ್ ಕುಮಾರ್ ಎ. (69 ವ.) ರವರು ನ. 7 ರಂದು ನಿಧನರಾದರು.

ಮಂಗಳೂರಿನಲ್ಲಿ ನ.4 ರಂದು ಸಂಭವಿಸಿದ ಅಪಘಾತದಲ್ಲಿ ತಲೆಗೆ ಗಂಭಿರ ಗಾಯಗೊಂಡು ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ನಿಶಾ, ಪುತ್ರಿಯರಾದ ನೇಹಾ ಸಂದೀಪ್ ನಾೖಕ್‌, ಸಮೀಕ್ಷಾ ಸುಶಿತ್ ನಾೖಕ್‌,ಪುತ್ರ ರಾಹುಲ್, ಸಹೋದರ ನವೀನ್ ನಾೖಕ್‌,ಸಹೋದರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ನ.9 ಕ್ಕೆ ಅಂತ್ಯ ಸಂಸ್ಕಾರ ಮೃತರ ಪುತ್ರ್ರಿಯರು ವಿದೇಶದಲ್ಲಿದ್ದು ಅವರು ಆಗಮಿಸುವ ಹಿನ್ನೆಲೆಯಲ್ಲಿ ಮೃತ ದೇಹವನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಯ ಶೀತಲೀಕರಣದಲ್ಲಿ ಇರಿಸಿ ಅಂತ್ಯ ಸಂಸ್ಕಾರವನ್ನು ನ.೯ ರಂದು ಪುತ್ತೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version