Connect with us

ಸ್ಥಳೀಯ

ಎವಿಜಿ ಶಾಲೆಯಲ್ಲಿ ರಕ್ಷಾ ಬಂಧನ

Published

on

ಪುತ್ತೂರು:- ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿಗಳು ರಕ್ಷೆಯನ್ನು ಒಬ್ಬರಿಗೊಬ್ಬರು ಕಟ್ಟಿಕೊಳ್ಳುವ ಮೂಲಕ ರಕ್ಷಾಬಂಧನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಇಂಜಿನಿಯರ್ ಹಾಗೂ ಸಮಾಜ ಸೇವಕರಾದ ಶ್ರೀ ಪ್ರಸನ್ನ ದರ್ಬೆ ಅವರು ಮಾತನಾಡಿ ರಕ್ಷಾಬಂಧನವೂ ಸಹೋದರತ್ವದ ಸಂಕೇತ ಎನ್ನುತ್ತಾ ಆ ದಿನದ ಮಹತ್ವವನ್ನು ಮತ್ತು ಪುರಾಣದ ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಿಗೆ ರಕ್ಷಾಬಂಧನದ ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆಯವರು ವಹಿಸಿದ್ದು, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರಕ್ಷಾಬಂಧನಕ್ಕಿರುವ ಪೌರಾಣಿಕ ಹಾಗೂ ಐತಿಹಾಸಿಕ ಕಾರಣಗಳನ್ನು ತಿಳಿಸುತ್ತಾ ನಾವೆಲ್ಲರೂ ಸಹೋದರ-ಸಹೋದರಿಯಂತೆ ಬದುಕಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗೌರವ ಉಪಸ್ಥಿತಿ ಸ್ಥಾನದಲ್ಲಿದ್ದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಒಬ್ಬರಾದ ಶ್ರೀಮತಿ ಗೌರಿ ಬನ್ನೂರು ಅವರು ಮಾತನಾಡಿ ರಕ್ಷಾಬಂಧನದ ಸಂದೇಶವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶೀನಪ್ಪ ಕುಲಾಲ್ ಸಾಂಧರ್ಬಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಎ ವಿ ನಾರಾಯಣ ,ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿಯಾದ ಶ್ರೀ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲಮೇಳು, ಮುಖ್ಯೋಪಾಧ್ಯಾಯರಾದ ಶ್ರೀ ಅಮರನಾಥ ಪಟ್ಟೆ ವಿದ್ಯಾರ್ಥಿ ನಾಯಕ ತನ್ವಿತ್ ಬಿ.ಜಿ ಉಪಸ್ಥಿತರಿದ್ದರು.

 

ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು, ಬೋಧಕ-ಬೋಧಕೇತರ ವೃಂದ , ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಪೋಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಾದ ಶ್ರೀವಿಕಾ,ಜ್ಞಾನ,ಅನಿಕಾ ಇವರು ಪ್ರಾರ್ಥನೆಯನ್ನು ಮಾಡಿದರು. ಶಿಕ್ಷಕಿಯರಾದ ಶ್ರೀಮತಿ ನಿಶ್ಮಿತಾ ಅವರು ಸ್ವಾಗತಿಸಿ, ಶ್ರೀಮತಿ ಶ್ರೀಪ್ರಿಯಾ ಅವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ರಾಧಾ ಅವರು ಧನ್ಯವಾದ ಸಮರ್ಪಿಸಿದರು. ಕುಮಾರಿ ಗಾಯತ್ರಿ ಅವರು ಪೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿತಂಡಿಯನ್ನು ವಿತರಿಸಲಾಯಿತು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version