ಬಿಲ್ಲವ ಸಮಾಜವನ್ನು ಗ್ರಾಮ ಮಟ್ಟದಲ್ಲಿ ಇನ್ನಷ್ಟು ಸಂಘಟಿತಗೊಳಿಸಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವತಿಯಿಂದ ಚಿಕ್ಕಮುಡ್ನೂರು ಗ್ರಾಮ ಸಮಿತಿ ರಚಿಸಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಶ್ರೀ ಸುರೇಂದ್ರ ಪೂಜಾರಿ (ಬಡಾವು) ಹಾಗೂ ಕಾರ್ಯದರ್ಶಿಯಾಗಿ ಶ್ರೀ ನವೀನ್ ಸುವರ್ಣ (ಕೆಮ್ಮಾಯಿ) ಅವರನ್ನು ಆಯ್ಕೆ ಮಾಡಲಾಗಿದೆ.
ಸಮಿತಿಯ ಸದಸ್ಯರಾಗಿ:- ಶ್ರೀ ಗೋಪಾಲ ಪೂಜಾರಿ,- ಶ್ರೀ ವಸಂತ ಪೂಜಾರಿ (ಆನಂತಿಮಾರು),- ಶ್ರೀ ಜೀವನ್ ಕುಮಾರ್ (ಬಿರ್ನಹಿತ್ಲು),- ಶ್ರೀ ಭರತ್ ಕುಮಾರ್ (ಆನಂತಿಮಾರು),- ಶ್ರೀ ರಾಜೇಶ್ (ಬಡಾವು)ಅವರುಗಳನ್ನು ಆಯ್ಕೆ ಮಾಡಲಾಗಿದೆ. ನೂತನ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾಜದ ಸಂಘಟನೆ, ಯುವಜನರ ಸಬಲೀಕರಣ ಮತ್ತು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಬಿಲ್ಲವ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸವನ್ನು ಬಿಲ್ಲವ ಬ್ರಿಗೇಡ್ (ರಿ.) ಪುತ್ತೂರು ವ್ಯಕ್ತಪಡಿಸಿದೆ. ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.