Connect with us

ಸ್ಥಳೀಯ

ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ನ 5ನೇ ಅಭ್ಯರ್ಥಿ ಘೋಷಣೆ ತೀರ್ಥಹಳ್ಳಿಯ ಅಳಿಯ ವಿನಯ್ ಕಾರ್ತಿಕ್ ಕಣಕ್ಕೆ ಆಪ್ತನನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದ ಸಿಎ ಡಿ.ಕೆ.ಶಿವಕುಮಾರ್

Published

on

ಜೂನ್ 18 ರಂದು ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ಬಿ.ಕೆ.ಹರಿಪ್ರಸಾದ್, ತಿಪ್ಪಣ್ಣಪ್ಪ ಕಮಕನೂರು, ಪಿ.ವಿ.ಮೋಹನ್ ಹಾಗೂ ಮಳವಳ್ಳಿ ಶಿವಣ್ಣ ಸೇರಿದಂತೆ ಕಾಂಗ್ರೆಸ್ ಕಳೆದ ಬುಧವಾರ ನಾಲ್ವರು ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಶುಕ್ರವಾರ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಪ್ತ ವಿನಯ್ ಕಾರ್ತಿಕ್ ಹೆಸರು ಘೋಷಿಸುವ ಮೂಲಕ ಮೇಲ್ಮನೆಗೆ ಕಾಂಗ್ರೆಸ್ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವಿಧಾನಸಭೆಯಲ್ಲಿ 136 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ 4 ಸ್ಥಾನ ಗೆಲ್ಲಬಹುದು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದಿಂದ ಸುಲಭವಾಗಿ ಇಬ್ಬರು ಅಭ್ಯರ್ಥಿಗಳು ಗೆಲ್ಲಬಹುದು.

ಕಾಂಗ್ರೆಸ್ ನ ಹಲವಾರು ಆಕಾಂಕ್ಷಿಗಳ ನಡುವೆ ಶಿವಕುಮಾರ್ ಅವರ ನೆಚ್ಚಿನ ಅಭ್ಯರ್ಥಿಯಾಗಿ ವಿನಯ್ ಕಣಕ್ಕೆ ಇಳಿಸಿರುವ ಕಾರಣ ಗೆಲುವು ಸ್ವತ ಶಿವಕುಮಾರ್ ಅವರಿಗೂ ಪ್ರತಿಷ್ಠೆ ಪ್ರಶ್ನೆ ಆಗಲಿದೆ. ಪ್ರತಿಯೊಬ್ಬ ಪರಿಷತ್ ಸದಸ್ಯರ ಗೆಲುವಿಗೆ ತಲಾ 32 ಮತಗಳು ಅಗತ್ಯವಿದೆ. ಬಿಜೆಪಿ ಹಾಗೂ ಜೆಡಿಎಸ್ ಮತಗಳನ್ನು ಸೆಳೆದುಕೊಂಡರೆ ವಿನಯ ಕಾರ್ತಿಕ್ ಗೆಲುವಿನ ಮೆಟ್ಟಿಲೇರಬಹುದು.

ಯಾರು ವಿನಯ್ ಕಾರ್ತಿಕ್ ಸಿಎಂ ಡಿ.ಕೆ.ಶಿವಕುಮಾರ್ ಅತ್ಯಂತ ಆಪ್ತರಾಗಿರುವ ವಿನಯ್ ಕಾರ್ತಿಕ್ ಕುಟುಂಬ ಭಾರತದ ಮೊಟ್ಟ ಮೊದಲ ಪ್ರಧಾನಿ ನೆಹರುರವರ ಕಾಲದಿಂದಲೂ ಕಟ್ಟಾ ಕಾಂಗ್ರೆಸ್ ಕುಟುಂಬ. ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಸ್ವಾತಂತ್ರ್ಯ ಸೇನಾನಿ ದೇವಂಗಿ ಮಾನಪ್ಪ ಅವರ ಪುತ್ರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದದ ಖಜಾಂಚಿ ದೇವಂಗಿ ಮನುದೇವ್, ಪರಿಣಿತ ದಂಪತಿಯ ಪುತ್ರಿ ತೇಜಸ್ವಿನಿ ಅವರನ್ನು ವಿನಯ್ ಕಾರ್ತಿಕ್ ವರಿಸಿದ್ದಾರೆ. ಹಾಗಾಗಿ ಇವರು ತೀರ್ಥಹಳ್ಳಿಯ ಅಳಿಯ. ವಿನಯ್ ಕಾರ್ತಿಕ್ ಮೈಸೂರಿನ ಸಾಹುಕಾರ್ ಚನ್ನಯ್ಯ, ಹಾಗೂ ದೊಡ್ಡಬಳ್ಳಾಪುರದ ಕೆ.ಹೆಚ್. ರಾಮಯ್ಯ ಅವರ ಮೊಮ್ಮಗ.
 
ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ ಕಿಂಗ್ ಮೇಕರ್ ಸಾಹುಕಾರ್ ಚನ್ನಯ್ಯ, ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯಂತಹ ರಾಷ್ಟ್ರೀಯ ನಾಯಕರ ನಿಕಟವರ್ತಿಯಾಗಿದ್ದರು. ಮೈಸೂರಿನ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದತ್ತ ದೇಶ ಸಾಗುತ್ತಿದ್ದ ಸಂಕ್ರಮಣ ಕಾಲದಲ್ಲಿ ಇವರ ರಾಜಕೀಯ ತಂತ್ರಗಾರಿಕೆ ನಿರ್ಣಾಯಕವಾಗಿತ್ತು.
ಕೆ.ಹೆಚ್. ರಾಮಯ್ಯ (ಕೆ.ಹನುಮಯ್ಯ) ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸಮಾಜ ಸುಧಾರಕರು ಮತ್ತು ಚಿಂತಕರಾಗಿದ್ದರು. ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕರಲ್ಲಿ ರಾಮಯ್ಯ ಒಬ್ಬರಾಗಿದ್ದು, ಆದಿಚುಂಚನಗಿರಿ ಮಠದ ಸ್ಥಾಪನೆಗೂ ಕಾರಣೀಭೂತರಾಗಿದ್ದರು. ಇವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version