ಪುತ್ತೂರು: 16. ನರಿಮೊಗರು ಗ್ರಾಮದ ಪಂಜಲ ದಲ್ಲಿ ಪುರಂದರ ಶಿಬರಾಡಿ ಮಾಲಕತ್ವದ ಸೇoದಿ ಅಂಗಡಿಗೆ ರಾತ್ರಿನ ಹೊತ್ತಿನಲ್ಲಿ ಕಳ್ಳರು ಬೀಗ ಒಡೆದು ಒಳಪ್ರವೇಶಸಿ ಒಳಗೆ ಇದ್ದ ಸಾಮಾನುಗಳನ್ನು ಚೆಲ್ಲಪಿಲ್ಲಿ ಮಾಡಿ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ತೆಗೆದು ಪರಾರಿಯಾಗಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಸರಿಸುಮಾರು ಸಾವಿರಗಿಂತಲೂ ಹೆಚ್ಚು ಹಣ ಇದೆ ಎಂದು ಮಾಲಕರು ತಿಳಿಸಿರುತ್ತಾರೆ. ಸದ್ರಿ ಇದೀಗ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಗ್ಗೆ ಮಾಹಿತಿ ತಿಳಿದು ಬಂದಿರುತ್ತದೆ.