Connect with us

ಸ್ಥಳೀಯ

ಪುಣಚದಲ್ಲಿ ಅಶೋಕ ಜನಮನ ಕಾರ್ಯಕ್ರಮದ ಪೂರ್ವಭಾವಿ ಸಭೆ

Published

on

ಪುಣಚ- ನವೆಂಬರ್ ತಿಂಗಳ 22ನೇ ತಾರೀಖಿನಂದು ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯಲಿರುವ ಅಶೋಕ ಜನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಉದ್ಯಮಿಯಾಗಿರುವ ನಾರಾಯಣ ಪೂಜಾರಿ ಅವರ ನಿವಾಸದಲ್ಲಿ ಜರುಗಿತು.

ಅಶೋಕ ಜನಮನ ಕಾರ್ಯಕ್ರಮದ ಬಗ್ಗೆ ಪ್ರವೀಣ್ ಪೂಜಾರಿ ಅಳಿಕೆ ರಾಮಣ್ಣ ಪಿಲಿಂಜ ಅವರು ಮಾಹಿತಿ ವಿವರಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಪುಣಚ ವಲಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಂತೋಷ್ ರೈ ಬೈಲುಗುತ್ತು,ಕ್ಸೇವಿಯರ್ ಡಿಸೋಜ, ಕಾರ್ಯದರ್ಶಿ ಸಿರಾಜ್ ಮಣಿಲ, ಹಿರಿಯರಾದ ಮಾರಪ್ಪ ಶೆಟ್ಟಿ ಬೈಲುಗುತ್ತು, ಟ್ರಸ್ಟ್ ಸದಸ್ಯರಾದ ಎಂ.ಎಸ್ ಹಮೀದ್ ಮಣಿಲ,ಸೋಮಶೇಖರ್, ಪ್ರಮುಖರಾದ ಶ್ರೀಧರ ಬಾಳೆಕಲ್ಲು,ಶಿವರಾಮ ಮಣಿಯಾಣಿ, ಮಹಾಲಿಂಗ ನಾಯ್ಕ, ಅಲ್ಬರ್ಟ್ ಡಿಸೋಜ, ನಾರಾಯಣ ಪೂಜಾರಿ ಗರಡಿ, ಸದಾನಂದ ಶೆಟ್ಟಿ ಗರಡಿ, ಹನೀಫ್ ಅಜ್ಜಿನಡ್ಕ, ಬಾಲಕೃಷ್ಣ ರೈ,ಯುಟಿ ಅಲಿ,ಅಬ್ದುಲ್ಲಾ ಹಾಜಿ,ಮೋಹಿದುಕುಂಙಿ,ಸುಂದರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು

ಟ್ರಸ್ಟ್ ಸದಸ್ಯರಾದ ರಾಜೇಂದ್ರ ರೈ ಬೈಲುಗುತ್ತು ಅವರು ಸ್ವಾಗತಿಸಿದರು. ಜಿ.ಎ ಶಂಸುದ್ದೀನ್ ಅಜ್ಜಿನಡ್ಕ ಅವರು ವಂದಿಸಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version