Connect with us

ಸ್ಥಳೀಯ

ಪುತ್ತೂರು: ಭಾರಿ ಮಳೆಗೆ ನೂತನ ನ್ಯಾಯಾಲಯದ ಆವರಣ ಗೋಡೆ ಕುಸಿತ

Published

on

ಪುತ್ತೂರು ಅಕ್ಟೋಬರ್ 07: ಪುತ್ತೂರು ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ನಗರದ ನೂತನ ನ್ಯಾಯಾಲಯ ಸಂಕೀರ್ಣದ ಆವರಣದ ತಡೆಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇತ್ತೀಚೆಗಷ್ಟೇ ನೂತನ ನ್ಯಾಯಾಲಯದ ಕಟ್ಟಡವು ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆದರೆ ಮಳೆ ಅಬ್ಬರಕ್ಕೆ ನ್ಯಾಯಾಲಯದ ಸಂಪರ್ಕ ರಸ್ತೆಯ ಪಕ್ಕದಲ್ಲೇ ಇದ್ದ ಆವರಣ ಗೋಡೆಯು ಸಂಪೂರ್ಣವಾಗಿ ನೆಲಸಮಗೊಂಡಿದೆ.

ಸುರಿದ ಧಾರಾಕಾರ ಮಳೆಯಿಂದಾಗಿ ಮಣ್ಣು ಸಡಿಲಗೊಂಡು, ರಸ್ತೆ ಬದಿಯ ತಡೆಗೋಡೆ ಒಂದೇ ಬಾರಿಗೆ ಕುಸಿದು ಬಿದ್ದಿದೆ. ಪರಿಣಾಮ ನ್ಯಾಯಾಲಯ ಸಂಕೀರ್ಣಕ್ಕೆ ಭಾರಿ ನಷ್ಟ ಉಂಟಾಗಿದೆ. ಘಟನೆಯಿಂದಾಗಿ ಸಂಪರ್ಕ ರಸ್ತೆಯ ಭಾಗಕ್ಕೂ ಹಾನಿಯಾಗುವ ಭೀತಿ ಎದುರಾಗಿದೆ. ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಅವಘಡ ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version