Connect with us

ಸ್ಥಳೀಯ

ಪತ್ನಿಯನ್ನು ಸ್ಟುಪಿಡ್’, ಯೂಸ್‌ಲೆಸ್ ಎಂದು ಬೈದರೆ ಅಪರಾಧವಲ್ಲವೇ? ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Published

on

ಪತ್ನಿಯನ್ನು ಸ್ಟುಪಿಡ್ (ದಡ್ಡ/ದಡ್ಡಿ) ಅಥವಾ ಉಪಯೋಗವಿಲ್ಲದವಳು ಎಂದು ಬೈಯುವುದು ಗಂಡನ ವೈಯಕ್ತಿಕ ನಡವಳಿಕೆ ಅಥವಾ ಕೋಪದ ಸ್ವಭಾವ. ಅದನ್ನು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ದೌರ್ಜನ್ಯ ಅಥವಾ ಆತ್ಮಹತ್ಯೆಗೆ ನೀಡಿದ ಪ್ರಚೋದನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಕೆನಡಾದಲ್ಲಿ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಪತಿಯ ವಿರುದ್ಧ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ದ್ವಿಪೀಠವು ಈ ಪ್ರಮುಖ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ 2021ರಲ್ಲಿ ವಿವಾಹವಾಗಿದ್ದ ಈ ದಂಪತಿ 2022ರಲ್ಲಿ ಕೆನಡಾದ ಟೊರಾಂಟೋ ನಗರಕ್ಕೆ ತೆರಳಿದ್ದರು. ಆದರೆ 2023ರಲ್ಲಿ ಪತ್ನಿಯು ತಾವು ತಂಗಿದ್ದ ಅಪಾರ್ಟ್‌ಮೆಂಟ್‌ನ 22ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಅವರು ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ, ‘ನಾನು ಜೀವನದಲ್ಲಿ ಸೋತಿದ್ದೇನೆ. ಕೆನಡಾಕ್ಕೆ ಬಂದು ವರ್ಷ ಕಳೆದರೂ ಸೂಕ್ತ ಕೆಲಸ ಸಿಗದೆ ಪರದಾಡುತ್ತಿದ್ದೇನೆ. ಜೀವನದಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ,’ ಎಂದು ಉಲ್ಲೇಖಿಸಿದ್ದರು.

ಆದರೆ ಮೃತರ ತಂದೆಯು ಭಾರತದಲ್ಲಿ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮದುವೆಯ ಸಮಯದಲ್ಲಿ 15 ತೊಲ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ಪಡೆದಿದ್ದಾರೆ ಮತ್ತು ಪತಿಯು ಮಗಳಿಗೆ ನಿರಂತರವಾಗಿ ‘ಸ್ಟುಪಿಡ್ ಮತ್ತು ಯೂಸ್‌ಲೆಸ್’ ಎಂದು ಬೈದು ಮಾನಸಿಕ ಕಿರುಕುಳ ನೀಡಿದ್ದೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದರು.

ವೈಯಕ್ತಿಕ ಸ್ವಭಾವ ಅಪರಾಧವಲ್ಲ’ ಪತಿಯ ಕೋಪದ ನಡವಳಿಕೆ ಅಥವಾ ವೈಯಕ್ತಿಕ ಸ್ವಭಾವದ ದೋಷಗಳನ್ನು ಅಪರಾಧಿಕ ಬೆದರಿಕೆ ಅಥವಾ ತೀವ್ರ ದೌರ್ಜನ್ಯ ಎಂದು ಪರಿಗಣಿಸಲು ಬರುವುದಿಲ್ಲ. ಇಂತಹ ಮಾತಿನ ಚಕಮಕಿಯನ್ನು ಆತ್ಮಹತ್ಯೆಗೆ ಪ್ರಚೋದನೆ ಎಂದು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version