ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ವತಿಯಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇಲ್ಲಿ ದಿನಾಂಕ04-11-2026 ರಂದು ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕೊಂಬೆಟ್ಟು ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ಪೈಕಿ ಭರತ ನಾಟ್ಯದಲ್ಲಿ ಸ್ತುತಿ ಪ್ರಥಮ ಸ್ಥಾನ, ಚರ್ಚಾ ಸ್ಪರ್ಧೆಯಲ್ಲಿ ಜೀವಿತಾ ಪ್ರಥಮ ಸ್ಥಾನ, ಹಿಂದಿ ಭಾಷಣದಲ್ಲಿ ಪಾಯಲ್ ದ್ವಿತೀಯ, ರಂಗೋಲಿಯಲ್ಲಿ ಸುಪ್ರಿಯಾ ದ್ವಿತೀಯ, ಆಶು ಭಾಷಣದಲ್ಲಿ ಎನ್.ಸುಮನಾ ನಾಯಕ್ ದ್ವಿತೀಯ, ಕವನ ವಾಚನದಲ್ಲಿ ಮೌಲ್ಯ ದ್ವಿತೀಯ, ಜನಪದ ನೃತ್ಯದಲ್ಲಿ ಚಿಂತನಾ ಮತ್ತು ತಂಡ ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಕ್ಷಮಾ ಭಟ್ ತೃತೀಯ, ರಸಪ್ರಶ್ನೆಯಲ್ಲಿ ಹಲೀಮತ್ ಅಮ್ನ ಹಾಗೂ ಲೇಖಶ್ರೀ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
.ಶಾಲಾ ಉಪಪ್ರಾಂಶುಪಾಲರಾದ ನಾಗರಾಜ್ ಭಟ್ ಇವರ ಮಾರ್ಗದರ್ಶನದಲ್ಲಿ ಶಿಕ್ಷಕವೃಂದದವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.