Connect with us

ಸ್ಥಳೀಯ

ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಬಿಗ್ ಶಾಕ್: ಇನ್ಮೇಲೆ HSRP ಇಲ್ವಾ? ದಂಡ ಫಿಕ್ಸ್..!

Published

on

​ರಾಜ್ಯದ ವಾಹನ ಸವಾರರೇ ಗಮನಿಸಿ! ಇಷ್ಟು ದಿನ ಸೈಲೆಂಟ್ ಆಗಿದ್ದ ಸಾರಿಗೆ ಇಲಾಖೆ ಈಗ ಮತ್ತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ನಿಮ್ಮ ವಾಹನಕ್ಕೆ ಇನ್ನೂ HSRP (High-Security Registration Plate) ಹಾಕಿಸಿಲ್ಲಾ ಅಂದ್ರೆ, ಇನ್ಮೇಲೆ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಏನಿದು ಹೊಸ ರೂಲ್ಸ್? ಯಾರಿಗೆ ಕಡ್ಡಾಯ? ಡೆಡ್‌ಲೈನ್ ಮುಗಿದ್ರೂ ಕೇರ್ ಮಾಡಿಲ್ಲ: ಎಷ್ಟೇ ಬಾರಿ ಗಡುವು ನೀಡಿ, ಮನವಿ ಮಾಡಿದರೂ ರಾಜ್ಯದ ವಾಹನ ಸವಾರರು ಮಾತ್ರ ತಲೆಕೆಡಿಸಿಕೊಂಡಿಲ್ಲ.

 

​ ಒಂದೂವರೆ ಕೋಟಿ ವಾಹನ ಬಾಕಿ: ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇನ್ನೂ ಬರೋಬ್ಬರಿ 1.5 ಕೋಟಿಗೂ ಅಧಿಕ ವಾಹನಗಳು HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ! ಯಾವ ವಾಹನಗಳಿಗೆ ಅನ್ವಯ?: 2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.

​ ಇಷ್ಟು ದಿನ ದಂಡ ಇರಲಿಲ್ಲ, ಇನ್ಮೇಲೆ ದಂಡಾಸ್ತ್ರ! ಇಷ್ಟು ದಿನ ನಿಯಮ ಜಾರಿಯಲ್ಲಿದ್ದರೂ ಸಾರಿಗೆ ಇಲಾಖೆ ವಾಹನ ಸವಾರರಿಗೆ ಯಾವುದೇ ದಂಡ ವಿಧಿಸುತ್ತಿರಲಿಲ್ಲ. ಆದರೆ ಹಳೇ ವಾಹನಗಳಿಗೆ HSRP ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರದಿಂದ ಕಡಕ್ ನಿರ್ದೇಶನ ಬಂದಿರುವುದರಿಂದ, ರಾಜ್ಯ ಸರ್ಕಾರ ಈಗ ಕಟ್ಟುನಿಟ್ಟಿನ ದಂಡಾಸ್ತ್ರ ಪ್ರಯೋಗಿಸಲು ಸಜ್ಜಾಗಿದೆ. ಸಚಿವ ಬೈರತಿ ಸುರೇಶ್ ಕಡಕ್ ಆಕ್ಷನ್! ಬೈರತಿ ಸುರೇಶ್ ಅವರು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಸಾರಿಗೆ ಇಲಾಖೆಯಲ್ಲಿ ನಿಯಮಗಳ ಪಾಲನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ HSRP ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಕೊನೆಯದಾಗಿ ಸಾರಿಗೆ ಇಲಾಖೆ ಮನವಿ: “ದಂಡ ಕಟ್ಟುವ ಮುನ್ನವೇ ಎಚ್ಚೆತ್ತುಕೊಳ್ಳಿ. ಕೂಡಲೇ ಆನ್‌ಲೈನ್ ಮೂಲಕ ಬುಕ್ ಮಾಡಿ ನಿಮ್ಮ ಹಳೇ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.”

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version