Published
7 hours agoon
By
Akkare News
ಅರಸೀಕೆರೆ: ಸಚಿವ ಸ್ಥಾನ ಕಳೆದುಕೊಂಡಿರುವ ಜಮೀರ್ ಅಹಮದ್ ಖಾನ್ ಅವರು ಶೀಘ್ರದಲ್ಲೇ ಮತ್ತೊಮ್ಮೆ ರಾಜ್ಯ ಮಂತ್ರಿಮಂಡಲವನ್ನು ಸೇರಲಿದ್ದಾರೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಇಲ್ಲಿನ ಅಲ್ ಅಮೀನ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಪ್ರಸ್ತುತ ಜಮೀರ್ ಅಹಮದ್ ಅವರ ಸುತ್ತ ಕೇಳಿಬರುತ್ತಿರುವ ಆಡಿಯೋ ವಿವಾದವು ಕೇವಲ ಅಪಪ್ರಚಾರದ ಉದ್ದೇಶದಿಂದ ಕೂಡಿದೆ. ಈ ಹಿಂದಿನ ದೊಡ್ಡ ಅಪಪ್ರಚಾರವನ್ನು ಮುಚ್ಚಿಹಾಕಲು ಈ ಹೊಸ ವಿವಾದವನ್ನು ಸೃಷ್ಟಿಸಲಾಗಿದೆ. ಹೀಗಾಗಿ ಜಮೀರ್ ಅವರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.