Connect with us

ಸ್ಥಳೀಯ

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯಾವರ ಸತತ ಪ್ರಯತ್ನ… 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ 19 ಮತ್ತು ಉಡುಪಿ ಜಿಲ್ಲೆಯ 4 ಕಂಬಳ ಕ್ಕೆ 1ಕೋಟಿ 15 ಲಕ್ಷ ಅನುದಾನ ಬಿಡುಗಡೆ

Published

on

ಕಂಬಳ ಸಮಿತಿಗಳಿಂದ ಅಭಿನಂದನೆಗಳು

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯಾವರ ಸತತ ಪ್ರಯತ್ನ. ದಿಂದ 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ 19 ಕಂಬಳಗಳಿಗೆ 1ಕೋಟಿ 15 ಲಕ್ಷ ಅನುದಾನ ಬಿಡುಗಡೆ ಯಾಗಿದೆ.

ಕರಾವಳಿ ಭಾಗದ ಕೃಷಿಕ ಬಂಧುಗಳ ನಂಬಿಕೆಯಿಂದ ಆಚರಿಸುವ ಕೃಷಿ ಬದುಕಿನ ಅಂಗವಾಗಿ ಕಂಬಳ ಉತ್ಸವನ್ನು ಆಚರಿಸಲಾಗುತ್ತಿದ್ದು, ಈ ಸಂಬಂಧ 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಸಹಯೋಗದೊಂದಿಗೆ ನಡೆದ 19 ಕಂಬಳಗಳಿಗೆ ತಲಾ ರೂ. 5.00 ಲಕ್ಷಗಳಂತೆ ಒಟ್ಟು ರೂ.95,00,000/-(ತೊಂಭತ್ತ ಐದು ಲಕ್ಷ ರೂಪಾಯಿ ಮಾತ್ರ) ಗಳ ಅನುದಾನ ಮತ್ತು ಉಡುಪಿ ಜಿಲ್ಲೆಯ 4 ಕಂಬಳಕ್ಕೆ 20ಲಕ್ಷ ಒಟ್ಟು. 1ಕೋಟಿ 15 ಲಕ್ಷ ರೂಪಾಯಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ರವರಿಗೆ ಉಲ್ಲೇಖಿತ (1), (2) ಮತ್ತು (3)ರ ಸರ್ಕಾರದ ಆದೇಶಗಳನ್ನ ಬಿಡುಗಡೆ ಮಾಡಲು ಮಂಜೂರಾತಿ ನೀಡಲಾಗಿದೆ.
  •  

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version