Connect with us

ಸ್ಥಳೀಯ

ಬಾಲ್ಯ ಸ್ನೇಹಿತನ ಅಗಲಿಕೆ ಕಂಬನಿ ಮಿಡಿದ ಶಾಸಕ ಅಶೋಕ್ ರೈ

Published

on

ಪುತ್ತೂರು: ತನ್ನ ಒಡನಾಡಿಯೂ,ಆತ್ಮೀಯರೂ ಆಗಿದ್ದ ಪುತ್ತೂರು ಭೂ ನ್ಯಾಯ ಮಂಡಳಿಯ ಸದಸ್ಯರಾದ ನಿರಂಜನ ರೈ ಮಠಂತಬೆಟ್ಟು ನಿಧನಕ್ಕೆ ಶಾಸಕ ಅಶೋಕ್ ರೈತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಠಂತಬೆಟ್ಟು ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ,ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷರಾಗಿ, ಕಂಬಳದ ವೀಕ್ಷಕ ವಿವರಣೆ ಹಾಗೂ ತೀರ್ಪುಗಾರರಾಗಿ ಅಪಾರ ಸೇವೆ ಸಲ್ಲಿಸಿದ್ದ ನಿರಂಜನ ರೈ ಮಠಂತಬೆಟ್ಟು ಅವರು ಮೃದು ಸ್ವಭಾವನ ಸಜ್ಜನ ವ್ಯಕ್ತಿಯೂ ಆಗಿದ್ದರು. ಮೃತರ ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಶಾಸಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮ ಮೊಟಕುಗೊಳಿಸಿ ಶಾಸಕರು ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version