Connect with us

ಸ್ಥಳೀಯ

ಯುವವಾಹಿನಿ (ರಿ.) ಮಾಣಿ ಘಟಕದಿಂದ ಪ್ರತಿಭಾ ಗೌರವ ಅಭಿನಂದನಾ ಕಾರ್ಯಕ್ರಮ

Published

on

ಮಾಣಿ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಘಟಕದ ಸದಸ್ಯರ ಮಕ್ಕಳಿಗೆ *’ಪ್ರತಿಭಾ ಗೌರವ ಅಭಿನಂದನಾ ಕಾರ್ಯಕ್ರಮ’*ವನ್ನು ಆಯೋಜಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ಆಧ್ಯಾ ಎಂ.ಎಸ್., ಗ್ರೀಷ್ಮಾ, ಪ್ರಗತಿ ಆರ್. ಸಾಲ್ಯಾನ್, ಹನ್ಶಿಕಾ ಎಸ್.ಡಿ. ಪೂಜಾರಿ, ಕೌಶಿಕ್, ದಿಶಾ ಕೆ. ಪೂಜಾರಿ, ದಿಶಾಂತ್ ಪೂಜಾರಿ ಹಾಗೂ ಪೂರ್ವಿ ಬಿ.ಕೆ. ಅವರನ್ನು ಗೌರವಿಸಿ ಅಭಿನಂದಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಹರೀಶ್ ಬಾಕಿಲ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಮಾಣಿಯ ಗೌರವಾಧ್ಯಕ್ಷ ಈಶ್ವರ ಪೂಜಾರಿ, ನೆರಳಕಟ್ಟೆ ರೈತರ ಸೇವಾ ಸಂಘದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ, ಹಾಗೂ ವ್ಯಕ್ತಿತ್ವ ವಿಕಸನ ನಿರ್ದೇಶಕ ಸತೀಶ್ ಮುರುವ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಸೃಷ್ಟಿ ಸಿಂಧು ಶ್ರೇಯ ಪ್ರಾರ್ಥನೆಗೈದರು. ಅಮಿತಾ ಪೆರ್ನೆ ಸ್ವಾಗತಿಸಿದರು. ಯುವವಾಹಿನಿ ಮಾಣಿ ಘಟಕದ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ವಂದಿಸಿದರು. ಶುಭ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version