Published
3 hours agoon
By
Akkare News
ಪುತ್ತೂರು: ಭಾನುವಾರ ಕುಡಿಪ್ಪಾಡಿ ಗ್ರಾಮದಲ್ಲಿ ಕುತೂಹಲಕಾರಿ ಘಟನೆಯೊಂದು ಗ್ರಾಮಸ್ಥರ ಮುಂದೆ ಸಾಕ್ಷಿಯಾಗಿದೆ. ಕುಡಿಪ್ಪಾಡಿ ಗ್ರಾಮಕ್ಕೆ ಶಾಸಕರು ಅನುದಾನ ನೀಡಿಲ್ಲ, ಇಲ್ಲಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಶಾಸಕರ ವಿರುದ್ದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ರಿಕ್ಷಾ ಚಾಲಕನೋರ್ವನ ಕೈಯಿಂದಲೇ ಶಾಸಕ ಅಶೋಕ್ ರೈ ಅವರು ಕುಡಿಪ್ಪಾಡಿ ಗ್ರಾಮದ ನೂತನ ರಸ್ತೆಯನ್ನು ಉದ್ಘಾಟಿಸಿದ ಘಟನೆ ನಡೆದಿದೆ.
ಕುಡಿಪ್ಪಾಡಿ ಗ್ರಾಮದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದೆ, ಶಾಸಕರು ಅನುದಾನ ನೀಡುತ್ತಿಲ್ಲ ಎಂದು ಕುಡಿಪ್ಪಾಡಿಯ ಚಂದ್ರಶೇಖರ ಎಂಬವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶಾಸಕ ಅಶೋಕ್ ರೈ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಕುಡಿಪ್ಪಾಡಿಯ ರಿಕ್ಷಾ ಚಾಲಕ ಹರೀಶ್ ನಾಯಕ್ ಎಂಬವರು ಭಾಗವಹಿಸಿದ್ದರು. ಶಾಸಕರ ವಿರುದ್ದ ಆರೋಪಗಳಿಗೆ ಇವರು ಸಹಮತವನ್ನೂ ವ್ಯಕ್ತಪಡಿಸಿದ್ದರು.