Connect with us

ಸ್ಥಳೀಯ

ವಿಟ್ಲ ಬ್ಲಾಕ್ : ಕುಡಿಪ್ಪಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನೂತನ ವಲಯಾಧ್ಯಕ್ಷರಾಗಿ ಧೀರಜ್ ಗೌಡ ನೇಮಕ

Published

on

​ಪುತ್ತೂರು: ವಿಟ್ಲ‌ಬ್ಲಾಕ್ ನ ಕುಡಿಪ್ಪಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕಾಂಗ್ರೆಸ್ ಮುಖಂಡ ಅರ್ಕ ರಾಧಾಕೃಷ್ಣಪೂಜಾರಿಯವರ ಮನೆಯಲ್ಲಿ ನಡೆಯಿತು. ಶಾಸಕ ಅಶೋಕ್ ರೈ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

 

​ ಸಭೆಯಲ್ಲಿ ವಲಯ ಕಾಂಗ್ರೆಸ್ ಗೆ ನೂತನ ಅಧ್ಯಕ್ಷರಾಗಿ ಧೀರಜ್ ಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾಗಿದ್ದ ಕೇಶವ ಅವರನ್ನು ಬ್ಲಾಕ್ ಉಪಾಧ್ಯಕ್ಷರನ್ನಾಗಿಯೂ ನೇಮಕ ಮಾಡಲಾಯಿತು.‌ ಸಭೆಯಲ್ಲಿ ಶಾಸಕರು ಪಕ್ಷ ಸಂಘಟನೆ ಮಾಡುವ ಬಗ್ಗೆ ಮಾತನಾಡಿದರು.

​ಸಭೆಯನ್ನುದ್ದೇಶಿಸಿ ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ವಿಟ್ಲ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ,ವಿಟ್ಲ ಬ್ಲಾಕ್‌ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಹಿರಿಯ‌ ಮುಖಂಡ ರಾಧಾಕೃಷ್ಣ ಪೂಜಾರಿ, ಶೋಭಾ ಮಯ್ಯ, ವಾಸುದೇವ ಮಯ್ಯ,ಸುಬ್ರಹ್ಮಣ್ಯ ಗೌಡ ಉಪಸ್ಥಿತರಿ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version